ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರಿಗೆ ಕರೆ -ಅನುರಾಗ ತ್ಯಾಗಿ

ಕೊಪ್ಪಳ : ೧೯.೧೨.೨೦೧೪  ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಹಾಗೂ ಸಿಂಡಿಯಾ ಸ್ಟೀಲ್ಸ್  ಲಿಮಿಟೆಡ್ ,ಮತ್ತು ಇಂಡಿಯಾ ಎಜ್ಯೂಕೇಶನ್ ಟ್ರಸ್ಟ್ ಕೊಪ್ಪಳ, ರವರ ಸಹಯೋಗದಲ್ಲಿ ೧೯.೧೨.೨೦೧೪ ರಿಂದ ೩ ದಿನದ ಸರಕಾರಿ ಅನುದಾನಿತ/ಅನುದಾನರಹಿತ ಪ್ರೌಢಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ  ವಿಷಯ ಸಹ ಶಿಕ್ಷಕರಿಗೆ ೧೦ ನೇ ತಗರತಿಯ ಫಲಿತಾಂಶ ಸುಧಾರಣೆಗೆ ಹಾಗೂ ಸಿ.ಸಿ.ಇ ಅನುಷ್ಠಾನ ಕುರಿತಂತೆ ಕಾರ್ಯಕ್ರಮವು  ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಉಪಾಧ್ಯಕ್ಷರಾದ ಅನುರಾಗ ತ್ಯಾಗಿ ಮುಖ್ಯ ಅತಿಥಿಯಾಗಿ  ಈ ಕಾರ್ಯಕ್ರಮವನ್ನು  ಉದ್ದೇಶಿಸಿ ಜಿಲ್ಲೆಯ ಫಲಿತಾಂಶವನ್ನು ಉತ್ತಮಗೊಳಿಸುವುದರ ಜೋತೆಗೆ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು  ರಾಜ್ಯದಲ್ಲಿ ೧೦ ನೇ ಸ್ಥಾನದಲ್ಲಿ ತರುವುದು  ಮತ್ತು ವಿದ್ಯಾರ್ಥಿಗಳಲ್ಲಿ ತಾಂತ್ರಿಕಜ್ಞಾನ ಹೆಚ್ಚಿಸಿ ಸಾಮಾಜಿಕ ಆರೋಗ್ಯ ಕಾಪಾಡಲು ಎಲ್ಲಾ ಶಿಕ್ಷಕರು ಶ್ರಮಿಸಬೇಕು ಹಾಗೂ ಜಿಲ್ಲೆಯ  ಕರೆ ನೀಡಿದರು.       
 ಹಿರಿಯ ವ್ಯವಸ್ಥಾಪಕರಾದ ಸೋಮಶೇಖರ ಭಾವಿ, ರವೀಂದ್ರ ದೇಸಾಯಿ, ಬಸವರಾಜ ಬಾಚಲಾಪೂರ, ರಿಜೇಶಲಾಲು, ಶಿಕ್ಷಣಾಧಿಕಾರಿ ಸಿ.ವಿ.ಮ್ಯಾಗೇರಿ, ಬಸವರಾಜಯ್ಯ ಬಿ.ಇ.ಓ, ವಿಷಯ ಪರಿವಿಕ್ಷಕರಾದ ಎಮ್.ಎಸ್ ಬಡದಾನಿ, ಗುರುಬಸವರಾಜ, ಪತ್ತಾರ, ಭಾಗವಹಿಸಿದ್ದರು ಸಂಪನ್ಮೂಲ ವ್ಯಕ್ತಿಗಳಾಗಿ, ಉಡುಪಿ, ಸಿರಸಿ, ಚಿತ್ರದುರ್ಗ ಜಿಲ್ಲೆಗಳಿಂದ ಆಗಮಿಸಿ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ೬೦೦ ಜನ ಶಿಕ್ಷಕರಿಗೆ ಅನುಭವ ಹಂಚಿಕೆಯ ಈ ಕಾರ್ಯಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.   

Leave a Reply