You are here
Home > Koppal News > ಕಾಂಗ್ರೆಸ್- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಎಂ.ವಿ. ಪಾಟೀಲ್

ಕಾಂಗ್ರೆಸ್- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಎಂ.ವಿ. ಪಾಟೀಲ್

ಕೊಪ್ಪಳ, ಏ.೨೭: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಒಂದೇ ನಾಣ್ಯದ ಏರಡು ಮುಖಗಳು ಅವರ ಅಭಿವೃದ್ಧಿ ಕಾರ್ಯಗಳನ್ನು ಕಳೆದ ೩೦ ವರ್ಷಗಳಿಂದ ಕ್ಷೇತ್ರದ ಜನತೆ ಕಂಡಿದ್ದೀರಿ ಅವರದು ಹೊಂದಾಣಿಕೆಯ ರಾಜಕೀಯ, ಅಧಿಕಾರದ ವ್ಯಾಮೋಹದವರು. ಗೌಡ್ರ ಅಧಿಕಾರ ರಾಜಕೀಯಕ್ಕಾಗಿ ಚುನಾವಣೆಗೀಳಿದಿಲ್ಲ, ಜನರ ಸೇವೆಗಾಗಿ ಅವಕಾಶ ಬೇಡಿ ಬಂದಿದ್ದಾರೆ

ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ವಿ. ಪಾಟೀಲ್ ಹೇಳಿದರು.

ಅವರು ಶನಿವಾರ ತಾಲೂಕಿನ ಹೀರೆಸಿಂದೋಗಿ ಗ್ರ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಮತದಾನದ ಎರಡು ದಿನ ಮುಂಚೆಯೇ ಜನರಿಗೆ ದುಡ್ಡು ಕೊಟ್ಟು ಬದಲಾಯಿಸಬಹುದೆಂದು ಅವರು ನಂಬಿದ್ದಾರೆ ಆದರೆ ಈ ಬಾರಿ ಮತದಾರರು ಅದನ್ನು ಸುಳ್ಳಾಗಿಸಬೇಕು. ಕ್ಷೇತ್ರದ ಪೂರ್ವಭಾಗದ ಮುಖಂಡರಿಗೆ ಮನ್ನಣೆ ನೀಡಿ ಅಧಿಕಾರ ನೀಡಿದ್ದೇವೆ ಆದರೆ ಈ ಬಾರಿಯಾದರೂ ಕ್ಷೇತ್ರದ ಪಶ್ಚಿಮ ಭಾಗದ ನಮ್ಮ ಗೌಡರಿಗೆ ಬೆಂಬಲಿಸಿ ಈ ಭಾಗದ ಅಭಿವೃದ್ಧಿಗೆ ಬೆಂಬಲಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ಜೆಡಿಎಸ್ ಪಕ್ಷ ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ ಮಾತನಾಡಿ, ಇಲ್ಲಿಯವರೆಗೂ ಎಲ್ಲರಿಗೆ ದುಡಿದು ಸಾಕಾಗಿದೆ. ಅವರಿಂದ ಅಭಿವೃದ್ಧಿ ನೆಪದಲ್ಲಿ ತಮ್ಮ ಅಭಿವೃದ್ಧಿಯೇ ಹೆಚ್ಚಾಗಿದೆ. ತಮ್ಮ ಕುಟುಂಬ, ಬಂಧುಭಾಂದವರ ಅಭಿವೃದ್ಧಿಯಾಗಿದೆ ಆದರೆ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ, ಅಲ್ಲದೇ ಅವರ ಬೆನ್ನಹಿಂದೆ ಯಾರನ್ನುಬೆಳೆಸಿಲ್ಲ. ಅಧಿಕಾರ ತಮ್ಮ ಕುಟುಂಬಕ್ಕೆ ಮಿಸಲಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ ಇದನ್ನು ಜನತೆ ಅರಿತು ನಿರ್ಧಾರ ಕೈಗೊಂಡು ಜೆಡಿಎಸ್‌ಗೆ ಬೆಂಬಲಿಸುವಂತೆ ಕೋರಿದರು.
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಈ ಭಾಗದ ಜನರ ಅಭಿಮಾನ ಮತದಾನವಾಗಿ ಪರಿವರ್ತನೆಗೊಳ್ಳಲಿ ಮತದಾನದ ಮಹತ್ವ ಅರಿತು ಮತದಾನ ಮಾಡಿ ಸುಳ್ಳು ಭರವಸೆ, ಆಮಿಷಗಳಿಗೆ ಓಳಗಾಗಬೇಡಿ ಎಂದು ಕಿವಿ ಮಾತು ಹೇಳಿದರು. 
ಅದ್ದುರಿ ಸ್ವಾಗತ: ಹೀರೆಸಿಂದೋಗಿ ಗ್ರಾಮಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಗ್ರಾಮಕ್ಕೆ ಆಗಮಿಸುತ್ತಿದಂತೆ ಗ್ರಾಮದ ಜನತೆ ಅಭಿಮಾನಿಗಳು ಪಟಾಕಿ ಸೀಡಿ ವಿವಿಧ ಘೋಷಣೆಗಳನ್ನು ಕುಗುತ್ತಾ ಅದ್ಧೂರಿಯಾಗಿ ಸ್ವಾಗತಿಸಿದರು. 

Leave a Reply

Top