ಸೈಯದ್ ಫೌಂಡೇಶನ್ ವತಿಯಿಂದ ಸಮವಸ್ತ್ರ ವಿತರಣೆ


ಕೊಪ್ಪಳ,ಆ.೧೩: ಕೊಪ್ಪಳದಲ್ಲಿ ಇದೇ ೧೯ರಂದು ನಡೆಯಲಿರುವ ಸುರಿಮಳೆ ಕನ್ನಡ ಚಲನಚಿತ್ರದ ಮುಹೂರ್ತ ಹಾಗೂ ಆ ಚಿತ್ರದಲ್ಲಿ ಫೈಟರ್‍ಸ್‌ಗಳಾಗಿ ಆಯ್ಕೆಯಾಗಿರುವ ವೀರಮದಕರಿ ಸ್ಟಂಟ್ಸ್ ತರಬೇತಿ ಶಾಲೆಯ ಯುವಕರ ತಂಡಕ್ಕೆ ಕೆ.ಎಂ.ಸೈಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ವತಿಯಿಂದ ೨೦ ಜನ ತಂಡದ ಕಲಾವಿದರಿಗೆ ಸಮವಸ್ತ್ರವನ್ನು ಕೆ.ಎಂ.ಸೈಯದ್‌ರವರು ತಮ್ಮ ನಿವಾಸದಲ್ಲಿಂದು ವಿತರಿಸಿದರು.
ಕೆ.ಎಂ.ಸೈಯದ್‌ರವರು ಮಾತನಾಡಿ, ಕೊಪ್ಪಳದ ಗವಿಮಠದಲ್ಲಿ ಕನ್ನಡ ಚಲನಚಿತ್ರ ಮುಹೂರ್ತ ನಿಗದಿಯಾಗಿದ್ದು, ಈ ಚಲನಚಿತ್ರ ಅಪಾರ ಜನ ಮೆಚ್ಚುಗೆ ಗಳಿಸಿ ಯಶಸ್ವಿಯಾಗಲಿ, ಇನ್ನುಳಿದ ನಮ್ಮ ಜಿಲ್ಲೆಯ ಕಲಾವಿದರು ಯಾರೇ ಇರಲಿ ಅವರಿಗೂ ಕೂಡಾ ತಮ್ಮ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತರಬೇತಿ ಶಾಲೆಯ ಮುಖ್ಯಸ್ಥ ಬಸವರಾಜ ಮಾಲಗಿತ್ತಿ, ಯಲ್ಲೇಶ ಮೇದಾರ್, ಪ್ರಕಾಶ ಜಕ್ಕಲಿ ನೇತೃತ್ವದ ಫೈಟರ್‍ಸ್ ತಂಡದಲ್ಲಿ ನಾಗರಾಜ ಕಲ್ಲನವರ, ಸಿದ್ದು ನಾಯಕ, ಮಂಜು ಜಬ್ಬಲಗುಡ್ಡ, ಶ್ರೀಕಾಂತ ಶೆಳ್ಳಿನ, ನಾಗರಾಜ ಕಲ್ಲನವರ್, ರಾಘು ಮತ್ತಿತರರು ಉಪಸ್ಥಿತರಿದ್ದರು.
ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಜೆಡಿಎಸ್ ಮುಖಂಡ ಮಲ್ಲಣ್ಣ ಬತ್ತಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment