ಜನತೆಗೆ ಸ್ಪೂರ್ತಿ ನೀಡುವ ಕವಿತೆಗಳು ಮೂಡಿಬರಲಿ – ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಭ್ರಷ್ಟತೆಯ ವಿರುದ್ದ ಜನತೆಗೆ ತೀವ್ರ ಅಸಮಾಧಾನವಿದೆ.ಸಿದ್ದಾಂತಗಳಿಗಾಗಿ ಹೋರಾಟ ಮಾಡಬೇಕಿದೆ.ಜನತೆಯಲ್ಲಿ ಜಾಗೃತಿ ಮೂಡಿಸುವ ಹತ್ತಾರು ಕವಿತೆಗಳು ಕವಿಸಮಯದಲ್ಲಿ ಮೂಡಿಬಂದಿವೆ. ಯೋಗ್ಯ ಕವಿತೆಗಳನ್ನು ಪತ್ರಿಕೆಗಳಿಗೆ ಪ್ರಕಟಣೆಗೆ ಕಳುಹಿಸಬೇಕು ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಎನ್ ಜಿಓ ಭವನದಲ್ಲಿ ಹಮ್ಮಿಕೊಂಡಿದ್ದ ೭೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವೀರಣ್ಣ ಹುರಕಡ್ಲಿ- ನಮ್ಮ ನಾಯಕರು, ಶಿವಪ್ರಸಾದ ಹಾದಿಮನಿ- ಕವಿತೆ, ಮಹೇಶ ಬಳ್ಳಾರಿ- ಕರಾಳ ಹೆಜ್ಜೆಗಳೊಂದಿಗೆ, ಎನ್.ಜಡೆಯಪ್ಪ- ಕೊನೆಯಿಲ್ಲದ ಪ್ರೀತಿ, ಬಸವರಾಜ ಸಂಕ್ಲಾಪೂರ-ಆಸೆ , ವಾಲ್ಮೀಕಿ ಎಕ್ಕರನಾಳ- ಎರಡು ಕಾಲಿನ ಹೆಗ್ಗಣ,  ಪುಷ್ಪಲತಾ- ಕರುಳ ಬಳ್ಳಿ, ವಿಜಯಲಕ್ಷ್ಮೀ ಮಠದ- ಅಜ್ಜಿಯ ನಗು, ಸಿರಾಜ್ ಬಿಸರಳ್ಳಿ- ಶಾಯಿರಿಗಳು, ಪುಷ್ಪಲತಾ ಏಳುಬಾವಿ- ಘಜಲ್ ಗಳು, ನಟರಾಜ ಸವಡಿ- ಮತದಾರ, ವಿಠ್ಠಪ್ಪ ಗೋರಂಟ್ಲಿ- ನನ್ನಂಥವರ ಹಾಡು, ಲಲಿತಾ ಭಾವಿಕಟ್ಟಿ- ಕರಗದ ಆಸೆ, ಶಾಂತಪ್ಪ ಬಡಿಗೇರ- ಬಣ್ಣ, ಗುರುರಾಜ ದೇಸಾಯಿ- ನನಗೆ ಸುಖವಿಲ್ಲ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಸಂಗಟಿ, ಶಿವಾನಂದ ಹೊದ್ಲೂರ,ಜಿ.ಎಸ್.ಬಾರಕೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಶಿವಪ್ರಸಾದ ಹಾದಿಮನಿ, ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
Please follow and like us:
error