ಹೆಂಡತಿಯ ಕೊಲೆ ಮಾಡಿದ ಆರೋಪಿ ಪತಿ ಪೊಲೀಸ್ ವಶಕ್ಕೆ

 ಕೊಪ್ಪಳ ತಾಲೂಕಿನ ಕಾಮನೂರ-ಭೀಮನೂರ ರಸ್ತೆಯ ಪಕ್ಕ ಭೀಮನೂರ ಸೀಮಾದಲ್ಲಿ ಕಳೆದ ಏ.೧೯ ರ ರಾತ್ರಿ ೯.೦೦ ಗಂಟೆಗೆ ಸುಮಂಗಲಾ (೨೫) ಎಂಬಾಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಪತಿ ಸಿದ್ದಲಿಂಗಯ್ಯ ತಂದೆ ಸಿದ್ದಯ್ಯ ಮಠಪತಿ ಎಂಬಾತನನ್ನು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಬಂದಿಸುವಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಿ ಸುಟ್ಟು ಹಾಕಿದ ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಎಸ್.ಪಿ ಹಾಗೂ ಡಿ.ಎಸ್.ಪಿ. ಸುರೇಶ ಬಿ.ಮಸೂತಿ ಇವರ ಮಾರ್ಗದರ್ಶನದಲ್ಲಿ ಸತೀಶ ಎಸ್.ಪಾಟೀಲ್ ಸಿ.ಪಿ.ಐ. ಕೊಪ್ಪಳ (ಗ್ರಾ) ವೃತ್ತರವರ ನೇತೃತ್ವದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಮಹಾಂತೇಶ ಸಜ್ಜನ್ ಹಾಗೂ ಸಿಬ್ಬಂದಿಯೊಂದಿಗೆ ತನಿಖೆ ಕೈಗೊಂಡು ಕೊಲೆ ನಡೆದ ಜಾಗೆಯಲ್ಲಿ ಸಿಕ್ಕ ವಸ್ತುಗಳ ಸಹಾಯದಿಂದ ಮತ್ತು ಅಪರಿಚಿತ ಹೆಣ್ಣು ಮಗಳ ಕಾಣೆಯಾದ ಬಗ್ಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದು ಈ ಮಹಿಳೆಯನ್ನು ಸುಮಂಗಲಾ ಗಂಡ ಸಿದ್ದಲಿಂಗಯ್ಯ ಮಠಪತಿ ಎಂದು ಗುರುತಿಸಲಾಗಿದೆ. ನಂತರ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸಿಕ್ಕ ಸಣ್ಣ ಸುಳಿವಿನ ಆಧಾರದ ಮೇಲಿಂದ ಮತ್ತು ಪೋನ್ ಕಾಲ್ ಲೀಸ್ಟ್ ಸಹಾಯದೊಂದಿಗೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರು ಆರೋಪಿ ಸಿದ್ದಲಿಂಗಯ್ಯ (೪೨) ತಂದೆ ಸಿದ್ದಯ್ಯ ಮಠಪತಿ ಇತನು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿದ್ದು ಮಾಹಿತಿ ಖಚಿತ ಪಡಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಆರೋಪಿಯ ಪತ್ನಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ತಂಡದಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ. ತಿಪ್ಪೇಸ್ವಾಮಿ, ರಾಜಮಹ್ಮದ್, ಮಲ್ಲಿಕಾರ್ಜುನ, ಅಂದಪ್ಪ, ರಂಗನಾಥ, ಉದಯಾನಂದ, ಸಂಗಮೇಶ, ಗವಿಸಿದ್ದಪ್ಪ, ಸುರೇಶ, ಪ್ರಸಾದ ಇವರುಗಳು ಭಾಗವಹಿಸಿದ್ದರು. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Leave a Reply