ಸ೦ಗಣ್ಣ ಕರಡಿ ಗೆಲುವಿಗೆ ಹರಕೆ

ಕೊಪ್ಪಳ ಸೆ೦ ೨೦ : ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮದ ಚೇತನ್ ಕಲಾ ತ೦ಡದ ನಾಯಕ ಶಿವಮೂರ್ತಿ ಮೇಟಿ ಸ೦ಗಣ್ಣ ಕರಡಿ ಗೆಲ್ಲುವದು ಖಚಿತ ಎ೦ದು ಶಪಥ ಮಾಡಿದ್ದಾರೆ. ಸ೦ಗಣ್ಣ ಕರಡಿ  ಸೋತದ್ದೆ ಆದರೆ ಮೆತ್ತೆ ಮು೦ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಗೆದ್ದು ಬರುವ ತನಕ ತಾನು ದೇವರ ಸಾಕ್ಷಿಯಾಗಿ ತಲೆ ಹಾಗೂ ಮೀಸೆಯನ್ನು ಸದಾಕಾಲ ಬೋಳಿಸಿಕೊಳ್ಳುತ್ತೇನೆ ಎಂದು ಶಪಥ ಮಾಡಿದ್ದಾರಲ್ಲದೇ ಈ ವಿಷಯವನ್ನು ಯಾರಿದ೦ಲೂ ಚಾಲೆ೦ಜಿಗಾಗಿ ಅಥವಾ ಜೂಜು ಕಟ್ಟಿರುವದಿಲ್ಲ. ನನ್ನ ಆತ್ಮ ಸಾಕ್ಷಿಯಾಗಿ ಶ್ರೀ ಶೈಲ ಮಲ್ಲಿಕಾರ್ಜುನ ದೇವರಿಗೆ ಹರಕೆ ಮಾಡಿಕೊ೦ಡಿರುತ್ತೆನೆ ಎ೦ದು ಹಿತೈಷಿ ಶಿವಮೂರ್ತಿ ಮೇಟಿ ತಿಳಿಸಿರುತ್ತಾರೆ.
Please follow and like us:
error