ನಾಳೆ ನನ್ನ ತಂಗಿ ಅಂತವಳಲ್ಲ ನಾಟಕ ಪ್ರದರ್ಶನ

 ನಗರದ ಸಾಹಿತ್ಯ ಭವನದಲ್ಲಿ ನಾಳೆ ದಿ. ೨೯ರಂದು ಶುಕ್ರವಾರ ಸಂಜೆ ೬-೩೦ಕ್ಕೆ ಶ್ರೀ ಗವಿಶ್ರೀ ಹವ್ಯಾಸಿ ಕಲಾ ಬಳಗ ಕೊಪ್ಪಳ ಇವರಿಂದ ಬಿ.ವ್ಹಿ. ಈಶ ಕೃತ ನನ್ನ ತಂಗಿ ಅಂತವಳಲ್ಲ ಉಚಿತ ನಾಟಕ ಪ್ರದರ್ಶನ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಅಂದ ಮತ್ತು ಅನಾಥ ಮಕ್ಕಳ ಸಹಾಯಾರ್ಥವಾಗಿ ಈ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನಾಟಕದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ವಹಿಸಲಿದ್ದು, ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಉದ್ಘಾಟಿಸಲಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ ಜ್ಯೋತಿ ಬೆಳಗಿಸಲಿದ್ದಾರೆ. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಮಾಜಿ ಅಧ್ಯಕ್ಷ ಶಂಭುಲಿಂಗನೌಡ ಹಲಗೇರಿ, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ನಗರಾಧ್ಯಕ್ಷೆ ಶ್ರೀಮತಿ ಲಲಿತಾ ಸಂಡೊರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ನಿಂಗೋಜಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕ ಟಿ. ಕೊಟ್ರಪ್ಪ ನಾಯಕ ಮುಖಂಡ ರಾದ ಶಕುಂತಲಾ ಹುಡೇಜಾಲಿ ಮತ್ತಿತರರು ಆಗಮಿಸಲಿದ್ದಾರೆ.
ನಾಟಕದ್ಲಿ ಎಸ್.ಜಿ. ಹಂಚಿ ನಾಳ (ರಾಜವರ್ಮ), ಕೊಟ್ರಯ್ಯ ಹಿರೇಮಠ (ಗುರು ನಾಥ), ವಿ.ವಿ. ಗಾರವಾಡಮಠ (ರವಿವರ್ಮ), ಬಿ.ವ್ಹಿ. ಮುಳಗುಂದಮಠ (ಸದಾಶಿವ), ಪ್ರಭು ಸಾಲಿಮಠ (ಡಾಕ್ಟರ್), ರಾಘವೇಂದ್ರ ತಳವಾರ (ಸುರೇಶ), ರವೀಂದ್ರ ಜೋಷಿ (ಅಮರೇಶ) ವಿರೇಶ ಕುಮಾರ (ಪ್ರ್ಯಾಂಕಿ), ಹಾಲಯ್ಯ ಹುಡೇಜಾಲಿ (ಸತ್ಯನಾರಾಯಣ) ಸದೀಪ ಹುಡೇಜಾಲಿ (ಜಾನ್), ಬಸವರಾಜ ಬೇವಿನಕಟ್ಟಿ (ಪಾಲಾಕ್ಷಿ), ಹೇಮಲತಾ ಹಿರೇಮಠ (ಸುಮಿತ್ರಾ), ಶಾರದಾ ಹಿರೇಮಠ (ಸುನಿತಾ), ಹೇಮಾ ಗದಗ (ವೈಶಾಲಿ), ಗಂಗಾ ಕೊಪ್ಪಳ (ಡ್ಯಾನ್ಸರ್), ವೆಂಕಟೇಶ ಹೆಗಡೆ ಇವರು ವಿಶೇಷ ಪಾತ್ರದಲ್ಲಿ ಮಂಜುಬೇಬಿ ಮತ್ತಿತರರು ನಾಟಕದಲ್ಲಿ ನಟಿಸಲಿದ್ದಾರೆ.
 ಬಸವರಾಜ ಹೆಸರೂರು ಹಾರ್ಮೋನಿಯಂ, ರಮೇಶ ಕೊಪ್ಪಳ ಕ್ಯಾಸಿಯಾ, ನಟರಾಜ ಗದಗ ಪ್ಯಾಡ, ಗ್ಯಾನೇಶಕುಮಾರ ಕೊಪ್ಪಳ ತಬಲಾ, ಗವೀಶ ಬಸಾಪಟ್ಟಣ ಹಿನ್ನೆಲೆ ಗಾಯಕರು ಭಾಗವಹಿಸಲಿದ್ದಾರೆ.
Please follow and like us:
error