ಆಕ್ಸಿಡೆಂಟ್ ಆದ ಸ್ಥಳಕ್ಕೆ ಹೋಗಿದ್ದ ಪೊಲೀಸರಿಗೆ ಲಾರಿ ಡಿಕ್ಕಿ ಕೊಪ್ಪಳದ ಬೇವೂರು ಠಾಣೆ ಎಎಸ್​ಐ ಅಮೀನ್​ಸಾಬ್​​​​ ಸ್ಥಳದಲ್ಲೇ ಸಾವು.

ಕೊಪ್ಪಳ-21- ಕೊಪ್ಪಳದ ಬೇವೂರು ಠಾಣೆ ಎಎಸ್​ಐ ಅಮೀನ್​ಸಾಬ್​​​​ ಸ್ಥಳದಲ್ಲೇ
ಮೃತಪಟ್ಟಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿ ನಡೆದಿದೆ. ಮುಖ್ಯಪೇದೆ ಶ್ಯಾಮ್​ಸಿಂಗ್​, ಪೇದೆ​​ ದಾದಾಪೀರ್​ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ
ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮುಂಜಾನೆ ಕುರಿ ತುಂಬಿದ್ದ ಲಾರಿ ಪಲ್ಟಿಯಾಗಿ
ಲಾರಿಯಲ್ಲಿದ್ದ ಮೌಲಾಸಾಬ್​​ ಎಂಬಾತ ಮೃತಪಟ್ಟಿದ್ದರು. ಈ ಸಂಬಂಧ ಘಟನಾ ಸ್ಥಳವನ್ನು
ಪರಿಶೀಲನೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Please follow and like us:
error