ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.

ಕೊಪ್ಪಳ-28- ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಬೇಟಿನೀಡಿದ ಭಾರತೀಯ ಕೃಷಿಕ ಸಮಾಜದ ಯುವ ಘಟಕದ ರಾಜ್ಯಾ ಕಾರ್ಯದರ್ಶಿ ವಿರೇಶ ಸಜ್ಜನ, ಮತ್ತು ರಾಜ್ಯ ನಿರ್ದೇಶಕ ವಿನೋದ ಸಜ್ಜನ ಬೇಟಿ ನೀಡಿ, ಜಿಲ್ಲೆಯ ಯಲಬುರ್ಗಾ ತಾಲೂಕಿನ ಯುವ ಘಟಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಸಿದರು.
ಯಲಬುರ್ಗಾ ತಾಲೂಕಿನ ಭಾರತೀಯ ಕೃಷಿಕ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಮಂಗಳೂರಿನ ಮಂಗಳಪ್ಪ ಬಸಪ್ಪ ಚಟ್ಟಿ ಮತ್ತು ಉಪಾಧ್ಯಕ್ಷರಾಗಿ ಬಿನ್ನಾಳದ ಬಸವರಾಜ ಹನಮಂತಪ್ಪ ಸಿ. ಆಯ್ಕೆ ಮಾಡಿ ಅವರಿಗೆ ಸಂಘಟನೆಯೆ ರೂಪ ರೇಶಗಳಬಗ್ಗೆ ತಿಳಿಸಿ ಕಾರ್ಯಪ್ರವೃತ್ತರಾಗಲು ಅಧಿಕೃತ ಆದೇಶ ನೀಡಿದ
ಈ ಸಂಧರ್ಭದಲ್ಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಸಜ್ಜನ, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪೊಲೀಸ್ ಪಾಟೀಲ, ಯರೇಹಂಚಿನಾಳ ಗ್ರಾ. ಪಂ ಅಧ್ಯಕ್ಷೆ ಶ್ರೀಮತಿ ಮಾಬೂಬಿ ಕಡೆಮನಿ, ಬಸವರಾಜ ಹಳ್ಳಿಕೇರಿ, ಕಲ್ಲಯ್ಯ ಗೊಂದಿಹೊಸಳ್ಳಿ, ನೂರಂದಪ್ಪ ಕೊಪ್ಪದ, ಬಸವರಾಜಪ್ಪ ಕ. ಚಟ್ಟಿ, ಮುತ್ತಪ್ಪ ಛಲವಾದಿ, ಸಂಗಪ್ಪ ಕುರಿ, ಶರಣಪ್ಪ ತಿಮ್ಮಾಪೂರ ಮುಂತಾದವರು ಉಪಸ್ಥಿತರಿದ್ದರು.

ರು.

Please follow and like us:
error