You are here
Home > Koppal News > ಧಾರ್ಮಿಕ ಕಾರ್ಯಕ್ರಮಗಳಿಂದ ಮನ ಶಾಂತಿ ಸಿಗಲಿದೆ : ಸಯ್ಯದ್

ಧಾರ್ಮಿಕ ಕಾರ್ಯಕ್ರಮಗಳಿಂದ ಮನ ಶಾಂತಿ ಸಿಗಲಿದೆ : ಸಯ್ಯದ್

ಕೊಪ್ಪಳ,ಡಿ.೨೨ :  ದೇವನೊಬ್ಬ  ನಾಮ ಹಲವು ಯಂಬಂತೆ ಪ್ರತಿಯೊಬ್ಬ ಮನುಷ್ಯ ಪೂಜೆ ಪುನಸ್ಕಾರ ಆಚರಣೆ ಪ್ರಾರ್ಥನೆಗಳಿಂದ ದೇವರ ಆಶಿರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಮನುಷ್ಯನಿಗೆ ಮನಶಾಂತಿ ಸಿಗಲು ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗಳಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲಿದೆ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಅಭಿಪ್ರಾಯ ಪಟ್ಟರು.
ಅವರು ನಗರದ ಕಲ್ಲಾನವರ ಓಣಿಯಲ್ಲಿ ಶನಿವಾರ ಬೆಳಿಗ್ಗೆ ಗುತ್ತೂರು ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಪೂಜೆ ನೆರೆವೆರಿಸಿದ ಬಳಿಕ ಏರ್ಪಡಿಸಿದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಧಾರ್ಮಿಕ ಕಾರ್ಯಾಚರಣೆ ದಿಂದ ಆ ಪರಮಾತ್ಮನ ಆಶಿರ್ವಾದ ದೊರೆಯಲಿದೆ ಮನಸಿಗೆ ಶಾಂತಿ ಸಿಗಲಿದೆ ಅದಕ್ಕಾಗಿ ಇಂತಹಾ ಧಾರ್ಮಿಕ ಕಾರ್ಯಕ್ರಮವನ್ನು ಹೆಚ್ಚಚ್ಚು ನಡೆಯಬೇಕು ಎಂದು ಹೇಳಿದರು.
ಮುಂದುವರೆದು ಮಾತನಾಡಿ ಆಂಜನಯ ದೇವರ ಕೃಪಾ ಕಟಾಕ್ಷ ಭಕ್ತಾದಿ ಪ್ರತಿಯೊಬ್ಬ ಜನರ ಮೇಲೆ ಇರಲಿ ಸರ್ವ ಜನರಿಗೆ ಒಳ್ಳೆಯದಾಗಲಿ ಕಾರ್ತಿಕೊತ್ಸವದ ಆಚರಣೆ ಶುಭವಾಗಲಿ ಜನರಿಗೆ ಶಾಂತಿ ನೆಮ್ಮದಿಯ ಬದುಕು ಆ ಆಂಜನಯ ದಯಾ ಪಾಲಿಸಲಿ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಭುಗೌಡ ಪಾಟೀಲ್, ಗೋವಿಂದಪ್ಪ ಕಲ್ಲನ್ನವರ, ಲಕ್ಷ್ಮಣ್ಣ ಕಲ್ಲನ್ನವರ, ಹುಲಗಪ್ಪ ಕಲ್ಲನ್ನವರ, ಮರಿಯಪ್ಪ ಕಲ್ಲನ್ನವರ, ಮಲ್ಲಿಕಾರ್ಜುನ, ನಾಗರಾಜ, ರಾಮು ಸೇರಿದಂತೆ ಅಪಾರ ಸಂಖ್ಯಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಸಯ್ಯದ್ ಫೌಂಡೇಶನ್‌ನ ಪದಾಧೀಕಾರಿಗಳು ಪಾಲ್ಗೊಂಡಿದ್ದರು.
ಪಂಚ್ ಕಮೀಟಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ಆಯ್ಕೆ ಕೆ.ಎಂ.ಸಯ್ಯದ್ ರಿಂದ ಸನ್ಮಾನ
ಕೊಪ್ಪಳ ೨೨ : ನಗರದ ಪಂಜುಮ್‌ಪಲ್ಟನ್ ಓಣಿಯ ಮುಸ್ಲಿಂ ಪಂಚ್‌ಕಮೀಟಿಗೆ ನೂತನ ಅಧ್ಯಕ್ಷರಾಗಿ ಓಣಿಯ ಹಿರಿಯ ನಾಯಕ ಅಬ್ದುಲ್ ಅಜೀಜ್ ಮಾನ್ವಿಕರ ರವರು ಅವಿರೋಧ ಆಯ್ಕೆಯಾಗಿದ್ದಾರೆ ಅವರಿಗೆ ಶನಿವಾರ ಮಧ್ಯಾಹ್ನ ನಗರ ಹೊರವಲಯದಲ್ಲಿರುವ ಹಜ್‌ಮರ್ದಾನೆ ಗೈಬ್ ದರ್ಗಾದ ಆವರಣದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್‌ರವರು ನೂತನ ಪಂಚ್ ಕಮೀಟಿಯ ಅಧ್ಯಕ್ಷರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಸಜ್ಜಾದ್‌ಸಾಬ ಕವಲೂರ, ಖಾದ್ರಿಸಾಬ, ಅಕಬರ್‌ಪಾಷಾ, ತನವೀರ್ ಸೇಟ್, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಅಶ್ಫಾಕ್ ಖಾದ್ರಿ, ನವಾಜ್ ಅಹಮದ್ ದಾಖದಾರ್, ಸಯ್ಯದ್ ಮಹ್ಮದ್ ಹುಸೇನಿ ಚೋಟೂ, ಸಯ್ಯದ್ ಯಜಧಾನಿಪಾಷಾ ಖಾದ್ರಿ ಸೇರಿದಂತೆ ಸಯ್ಯದ್ ಫೌಂಡೇಶನ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Top