ಬಣ್ಣ ಬಣ್ಣದ ಸಕ್ಕರೆ ಆರತಿಗಳು

ಗೌರಿ ಹುಣ್ಣಿಮೆ ನಿಮಿತ್ತ ನಗರದಲ್ಲಿ ಸಕ್ಕರೆ ಆರತಿಗಳ ಮಾರಾಟ ಭರದಿಂದ ಸಾಗಿದೆ. ನಗರದ ಜವಾಹರ ರಸ್ತೆಯಲ್ಲಿ , ಟಾಂಗಾಕೂಟ ಹತ್ತಿರ, ಬಸ್ ಸ್ಟಾಂಡ್ ಹತ್ತಿರ ಬಂಡಿಗಳಲ್ಲಿ ನೀಟಾಗಿ ಜೋಡಿಸಿದ ಸಕ್ಕರೆ ಆರತಿಗಳು ನೋಡುಗರನ್ನು ಸೆಳೆಯುತ್ತಿವೆ. ಕೇಜಿಗೆ 70ರಿಂದ 100 ರೂವರೆಗೆ ಮಾರಾಟ ಮಾಡಲಾಗುತ್ತಿದೆ. ಹುಣ್ಣಿಮೆಯ ದಿನ ಈ ಆರತಿಗಳಿಗೆ ಹೆಚ್ಚಿನ ರೇಟು ಬರುವ ನಿರೀಕ್ಷೆಯಲ್ಲಿ ಮಾರಾಟಗಾರರಿದ್ದಾರೆ. ಪ್ರತಿ ಸಲ ಕನಿಷ್ಠ 1 ರಿಂದ 1.5 ಕ್ವಿಂಟಲ್ ನ ಆರತಿಗಳನ್ನು ಮಾರುತ್ತೇನೆ ಎನ್ನುತ್ತಾರೆ ಆರತಿ ಮಾರಾಟಗಾರರು.
Please follow and like us:
error