ಪ್ರೋತ್ಸಾಹಧನ ಮಂಜೂರು ಫೆ.೦೫ ರಿಂದ ದಾಖಲಾತಿ ಪರಿಶೀಲನೆ.

ಕೊಪ್ಪಳ, ಜ.೨೯
(ಕ ವಾ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ
ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುವ
ಪ್ರೋತ್ಸಾಹಧನಕ್ಕೆ ಸಂಬಂಧಪಟ್ಟಂತೆ ಫೆ.೦೫ ಮತ್ತು ೦೬ ರಂದು ಅರ್ಜಿದಾರರ ಮೂಲ ದಾಖಲೆಗಳ
ಪರಿಶೀಲನೆ ನಡೆಯಲಿದೆ.
     ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ-೨, ಪದವಿ ಅಂತಿಮ,
ಸ್ನಾತಕೋತ್ತರ ಮತ್ತು ಕೃಷಿ, ಎಂಜಿನಿಯರಿಂಗ್, ಮೆಡಿಸಿನ್, ವೆಟರ್ನರಿ, ಪದವಿಯಲ್ಲಿ
ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಪ್ರಸಕ್ತ ಸಾಲಿನಲ್ಲಿ
ಮಂಜೂರಿ ಮಾಡಬೇಕಾಗಿರುವುದರಿಂದ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ
ಮೂಲ ದಾಖಲಾತಿಗಳನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರು
ಕೆಳಕಾಣಿಸಿದ ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಕಛೇರಿಗಳಲ್ಲಿ
ಕೆಳಕಾಣಿಸಿದ ದಿನಾಂಕಗಳಂದು ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್
ಮೂಲಕ ಅರ್ಜಿ ಸಲ್ಲಿಸಿದ ಕೊಪ್ಪಳ ತಾಲೂಕಿನ ಅಭ್ಯರ್ಥಿಗಳು ಫೆ.೦೫ ರಂದು ಬೆಳಿಗ್ಗೆ ೧೧
ಗಂಟೆಗೆ, ಗಂಗಾವತಿ ತಾಲೂಕಿನ ಅಭ್ಯರ್ಥಿಗಳು ಅದೇ ದಿನ ಮದ್ಯಾಹ್ನ ೦೩.೦೦ ಗಂಟೆಗೆ,
ಕುಷ್ಟಗಿ ತಾಲೂಕಿನ ಅಭ್ಯರ್ಥಿಗಳು ಫೆ.೦೬ ರಂದು ಬೆಳಿಗ್ಗೆ ೧೧ ಗಂಟೆಗೆ, ಯಲಬುರ್ಗಾ
ತಾಲೂಕಿನ ಅಭ್ಯರ್ಥಿಗಳು ಅದೇ ದಿನ ಮದ್ಯಾಹ್ನ ೦೩.೦೦ ಗಂಟೆಗೆ ಆಯಾ ತಾಲೂಕುಗಳ ಸಮಾಜ
ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗಳಲ್ಲಿ ತಮ್ಮ ಮೂಲ ದಾಖಲಾತಿಗಳೊಂದಿಗೆ
ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ್ ಅವರು
ತಿಳಿಸಿದ್ದಾರೆ.
Please follow and like us:
error