ದರ್ಶನ ಅಭಿನಯದ ಬುಲ್ ಬುಲ್ ಚಿತ್ರಕ್ಕೆ ಕಿಕ್ಕೀರಿದ ಅಭಿಮಾನಿಗಳು, ಮೆರವಣಿಗೆ

ಕೊಪ್ಪಳ, ಮೇ.೧೦: ಇಂದು ಬಿಡಗಡೆಗೊಂಡಿರುವ ದರ್ಶನ ಹಾಗೂ ಅಂಬರೀಶ ಅಭಿನಯದ ಹೊಚ್ಚಹೊಸ `ಬುಲ್ ಬುಲ್’ ಚಿತ್ರದ ಆರಂಭಕ್ಕೆ ನಗರದಲ್ಲಿ ಕಿಕ್ಕೀರಿದ ದರ್ಶನ ಅಭಿಮಾನಿಗಳಿಂದ ಅದ್ದೂರಿ ಆರಂಭ  ಪಡೆಯಿತು.
ಬೆಳಿಗ್ಗೆಯಿಂದಲೇ ಅಭಿಮಾನಿಗಳು ಇಲ್ಲಿನ ಲಕ್ಷ್ಮೀಚಿತ್ರಮಂದಿರದಲ್ಲಿ ಜಮಾವಣೆಗೊಂಡು ಬುಲ್ ಬುಲ್ ಚಿತ್ರದ ವಿವಿಧ ಬಗೆಯ ದರ್ಶನ ಪೋಸ್‌ಗಳ ಬ್ಯಾನರ್‌ಗಳಲ್ಲಿ ತಮ್ಮ ಪೋಟೋ ಹಾಕಿಸಿ ಚಿತ್ರ ಮಂದಿರದ ಆವರಣದಲ್ಲಿ ಹಾಕಿಸಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ದರ್ಶನ ಭಾವಚಿತ್ರಕ್ಕೆ ಬಗೆಬಗೆಯ ಹೂ ಮಾಲೆ ಹಾಕಿ ಸಂತೋಷ ಪಡುತ್ತಿದ್ದರು. ೧೧ ಗಂಟೆಗೆ ಆರಂಭಗೊಳ್ಳುವ ಮೊದಲ ಶೋ ನೋಡಲೆಂದೇ ಆಗಮಿಸಿದ ಕೆಲ ಹಳ್ಳಿಗಳ ಅಭಿಮಾನಿಗಳು, ಯುವಕರ ದಂಡು ಬೆಳಿಗ್ಗೆಯಿಂದ ಚಿತ್ರಮಂದಿರದ ಆವರಣದಲ್ಲಿ ಬಿಡುಬಿಟ್ಟಿತ್ತು.  ಒಟ್ಟಾರೆಯಾಗಿ ದರ್ಶನ ಅಭಿಮಾನಿಗಳ ಬಳಗದಿಂದ ಅದ್ಧೂರಿಯಾಗಿ ನಗರದಲ್ಲಿ ಬುಲ್ ಬುಲ್ ಚಿತ್ರ ವಿಕ್ಷಣೆಗೆ ಆರಂಭ ಪಡೆಯಿತು. ಅಭಿಮಾನಿಗಳು ಟಿಕೇಟ್ ಕೌಂಟರ್‌ಗೆ ಮುಗ್ಗಿಬಿದ್ದು ಟಿಕೇಟ್ ಪಡೆದು ಚಿತ್ರ ವಿಕ್ಷಿಸಿ ಚಿತ್ರ ಶತದಿನೋತ್ಸವ ಆಚರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಶುಭ ಹಾರೈಸಿದರು.  
ಮೆರವಣಿಗೆ: ಬುಲ್ ಬುಲ್ ಚಿತ್ರ ಬಿಡುಗಡೆಗೂ ಮುನ್ನ ತಾಲೂಕಿನ ಕುಣಕೇರಿ ತಾಂಡದ ದರ್ಶನ ಅಭಿಮಾನಿಗಳ ಬಳಗ, ನಗರದ ಪ್ರಮುಖ ಬೀದಿಗಳಲ್ಲಿ ದರ್ಶನ ಭಾವಚಿತ್ರದ ಭವ್ಯ ಮರೆವಣಿಗೆಯನ್ನು ಅತ್ಯಂತ ವಿಜ್ರಂಭಣೆಯಿಂದ ನೆರವೇರಿಸಿತು. ಸುರೇಶ ಮಾಳಗಿ, ವೆಂಕಟೇಶ ಬಾಳನಗೌಡ್ರ, ಉಮೇಶ ಬಡಗಿ ಹಾಗೂ ಚನ್ನಪ್ಪ ನೇತೃತ್ವದ ತಂಡ ಭವ್ಯ ಮೆರವಣಿಗೆಯನ್ನು ಲಕ್ಷ್ಮೀ ಚಿತ್ರಮಂದಿರದ ಮಾಲಿಕರಾದ ವಿರೇಶ ಮಾಹಾಂತಯ್ಯನಮಠ ಅತ್ಯಂತ ಆದರದಿಂದ ಸ್ವಾಗತಿಸಿದರು.

Leave a Reply