ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರಿಗೆ ಶಾಸಕ ಸುರೇಶಬಾಬು ಕರೆ


ಕೊಪ್ಪಳ ನ ೧೩ : ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ಬಲವರ್ಧನೆಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕಂಪ್ಲಿ ಶಾಸಕ ಸುರೇಶಬಾಬು ಕರೆ ನೀಡಿದರು.
ಅವರು ರವಿವಾರ ಸಂಜೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸಯ್ಯದ್ ನಿವಾಸಕ್ಕೆ ಭೇಟಿ ನೀಡಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತು ಕೆ.ಎಂ.ಸಯ್ಯದ್ ರೊಂದಿಗೆ ಸುಧಿರ್ಘವಾಗಿ ಚರ್ಚಿಸಿದರು.
ಅವರು ಪಕ್ಷವನ್ನು ತಾಲೂಕಿನ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವಂತೆ ತಿಳಿಸಿದ ಅವರು ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ  ಪಕ್ಷದ ಎಲ್ಲಾ ಮುಖಂಡರೊಂದಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇವೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಮುಖಂಡರಾದ ಕೆ.ಎಂ.ಸಯ್ಯದ್ ಅವರಿಗೆ ಕೊಪ್ಪಳ ಕ್ಷೇತ್ರದಿಂದ ಟಿಕೇಟ್ ನೀಡಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ‍್ಯಕರ್ತರು ಶಾಸಕ ಸುರೇಶಬಾಬು ಅವರನ್ನು ಒತ್ತಾಯಿಸಿದರು ಈ ಸಂದರ್ಭದಲ್ಲಿ ಶಾಸಕ ಸುರೇಶಬಾಬು ಮಾತನಾಡಿ ಸಯ್ಯದ್ ಅವರು ಪಕ್ಷವನ್ನು ಕೊಪ್ಪಳ ಕ್ಷೇತ್ರದಲ್ಲಿ ಬೇರು ಮಟ್ಟದಿಂದ ಸಂಘಟಿಸಿದ್ದಾರೆ, ಅದನ್ನು ನಾವು ಗಮನಿಸಿದ್ದೇವೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆ.ಎಂ.ಸಯ್ಯದ್‌ರವರಿಗೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಟಿಕೇಟ್ ನೀಡುವ ಕುರಿತು ಮುಖಂಡರೊಂದಿಗೆ ಚರ್ಚಿಸಿ ಟಿಕೇಟ್ ನೀಡುವುದಾಗಿ ಕಾರ್ಯಕರ್ತರಿಗೆ ಭರವಸೆ ನೀಡಿದರು ನಂತರ ಅವರು ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಕಾರ‍್ಯಕರ್ತರೊಂದಿಗೆ ಪಕ್ಷದ ಸಂಘಟನೆ ಕುರಿತು ಸುಧಿರ್ಘವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ತಿಮ್ಮರೆಡ್ಡಿ ಯರಂಗಳಿ, ರಾಜಶೇಖರ ಗೋನಾಳ, ಪ್ರಭುಗೌಡಪಾಟೀಲ್, ಲಕ್ಷ್ಮೀಪ್ರಿಯಾ, ಶಾಮೀದ್ ಸಾಬ ಕಿಲ್ಲೆದಾರ, ಮಾಜಿ.ಜಿ.ಪಂ.ಸದಸ್ಯ ಯಕಪ್ಪ ಕ್ಯಾಶಪ್ಪನವರ, ಮಂಜುನಾಥ ಭಾಗ್ಯನಗರ, ಅಖ್ತರ್‌ಸಾಬ ಅಡ್ಡೆವಾಲೆ, ಖಾಜಾಪಾಷಾ ಲಾಠಿ, ಹನುಮಂತಪ್ಪ, ಮುಸ್ತಫಾ ಅಡ್ಡೆವಾಲೆ ಸೇರಿದಂತೆ ಮತ್ತೀರರು ಉಪಸ್ಥಿತರಿದ್ದರು.

Please follow and like us:
error