ಅಗಳಕೇರಾದಲ್ಲಿ ಅದ್ಧೂರಿ ಕನಕದಾಸ ಜಯಂತಿ.

ಕೊಪ್ಪಳ,ಡಿ.೧೪ ತಾಲೂಕಿನ ಅಗಳಕೇರಾ ಗ್ರಾಮದದಲ್ಲಿ ೫೨೮ ನೇ ಕನಕಜಯಂತಿಯನ್ನು ಅತ್ಯಂತ ಅದ್ಧೂರಿಯಿಂದ ನೇರವೇರಿಸಲಾಯಿತು. ಹಾಲವರ್ತಿ ಕಾಗಿನೆಲೆಯ ಶಾಖಾ ಪೀಠದ ಜಡಿಸಿದ್ದೇಶ್ವರ ಸ್ವಾಮಿಗಳು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ರಾಜು ಹಿಟ್ನಾಳ, ಲಿಂಗರಾಜ ಚಳಗೇರಿ, ಹುಲಗಪ್ಪ ಗಡಾದ, ಲಿಂಗರಾಜ ಬೆಳ್ಳೂರು, ಮಲ್ಲಿಕಾರ್ಜುನ ಕಿನ್ನಾಳ, ದೇವರಾಜ ಗಡಾದ, ಪರಸಪ್ಪ ಗಮಣಿ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ ಮತ್ತು ಕುಂಭ,ಕಳಸದೊಂದಿಗೆ ಬಾಜಭಜಂತ್ರಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕನಕಯುವಸೇನೆ ಆಕರ್ಷಕ ಬೈಕ್ ರ್‍ಯಾಲಿ ನಡೆಸಿತು. ನಂತರ ನಡೆದ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಮಾಜದ ಬಂಧುಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನೇರೆದಿದ್ದರು ಎಂದು ದೇವರಾಜ ಗಡಾದ ತಿಳಿಸಿದ್ದಾರೆ.
Please follow and like us:
error