ಜೋಗಯ್ಯನ ಪ್ರತಾಪ ಇಂದಿನಿಂದ


ಬಹು ನಿರೀಕ್ಷೆಯ ಚಿತ್ರ ಜೋಗಯ್ಯ ಇಂದು ಬಿಡುಗಡೆಯಾಗಲಿದೆ. ಹಲವಾರು ಕಾರಣಗಳಿಗಾಗಿ ಈ ಚಿತ್ರ ಎಲ್ಲರ ಗಮನ ಸೆಳೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರ 100ನೇ ಚಿತ್ರ, ಜೋಗಿ ಚಿತ್ರದ ನಂತರ ಪ್ರೇಮ ಮತ್ತು ಶಿವರಾಜ್ ಕುಮಾರ್ ಒಂದಾಗಿ ನಟಿಸಿರುವ ಬಹುಕೋಟಿ ವೆಚ್ಚದ ಚಿತ್ರ, ರಕ್ಷಿತಾ ನಿರ್ಮಾಪಕಿಯಾಗಿರುವ ಚಿತ್ರ , ಹಾಡು ಮತ್ತು ಫೈಟ್ ನ್ನು ತ್ರೀಡಿಯಲ್ಲಿ ಚಿತ್ರೀಕರಿಸಿರುವ ಚಿತ್ರ ಹೀಗೆ ಹಲವಾರ ವಿಶೇಷತೆಗಳನ್ನು ಒಳಗೊಂಡ ಚಿತ್ರಕ್ಕೆ ಒಂದು ವಾರದಿಂದಲೇ ಟಿಕೆಟ್ ಬುಕಿಂಗ್ ಮಾಡಲಾಗುತ್ತಿದೆ. ಒಂದು ವಾರ ಮೊದಲೇ ರಾಜ್ಯಾಂದ್ಯಂತ ಟಿಕೆಟ್ ಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿಗೆ ರಿಸಲ್ಟ್ ಮಾರ್ನಿಂಗ್ ಶೋ ನಂತರ ಗೊತ್ತಾಗಲಿದೆ.

Leave a Reply