You are here
Home > Koppal News > ಜನಪರ ಯೋಜನೆಗಳೆ ಉಪ ಚುನಾವಣೆಯ ಗೆಲುವಿಗೆ ಶ್ರೀರಕ್ಷೆ- ಅಂದಣ್ಣ ಅಗಡಿ

ಜನಪರ ಯೋಜನೆಗಳೆ ಉಪ ಚುನಾವಣೆಯ ಗೆಲುವಿಗೆ ಶ್ರೀರಕ್ಷೆ- ಅಂದಣ್ಣ ಅಗಡಿ

 ಕೊಪ್ಪಳ- ೨೫ ನಗರದ ಅಶೋಕ ವೃತ್ತದಲ್ಲಿ ಮದ್ಯಾಹ್ನ ೧೨.೩೦ ಕ್ಕೆ ಬಳ್ಳಾರಿ ಹಾಗೂ ಚಿಕ್ಕೋಡಿ-ಸದಲಗ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿನ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾಡಾ ಅಧ್ಯಕ್ಷ ಹಾಗೂ ಕಾಂಗ್ರೇಸ್ ಧುರಿಣರಾದ ಅಂದಣ್ಣ ಅಗಡಿ ಯವರು ರಾಜ್ಯ ಜನಪ್ರೀಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನಾಡಿನ ಎಲ್ಲ ವರ್ಗದ ಜನತೆಗೆ ಕೊಡುತ್ತಿರುವ ಜನಪರ ಯೋಜನೆಗಳು ಉಪ ಚುನಾವಣೆಯಲ್ಲಿ ಮಹತ್ತರ ಕಾರ್ಯ ನಿರ್ವಹಿಸಿ ಕ್ಷೇತ್ರದ ಜನತೆ ಕಾಂಗ್ರೇಸ್ ಪಕ್ಷವನ್ನು ಅಭೂತಪೂರ್ವವಾಗಿ ಬೆಂಬಲಿಸಿ ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಿದೆ. ಬಳ್ಳಾರಿಯನ್ನು ತಮ್ಮ ಬಿ.ಜೆ.ಪಿ. ಭದ್ರಕೋಟೆ ಎಂದು ಜಂಬಕೊಚ್ಚಿಕೊಳ್ಳುತ್ತಾ ಪಾಳೆಗಾರರಂತೆ ವರ್ತಿಸುತ್ತಿದ್ದ ಬಿ.ಜೆ.ಪಿ. ನಾಯಕರಿಗೆ ಬಳ್ಳಾರಿಯ ಮಹಾಜನತೆ ಕಾಂಗ್ರೇಸ್ ಪಕ್ಷವನ್ನು  ಗೆಲ್ಲಿಸಿ ಪ್ರಜಾ ಪ್ರಬುತ್ವದ ಬಾವುಟವನ್ನು ಹಾರಿಸಿದ್ದಾರೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪರೋಕ್ಷ ಹಾಗೂ ಅಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಕಾಂಗ್ರೇಸ್ ಸಚಿವರಿಗೂ ಪಕ್ಷದ ದುರೀಣರಿಗೂ ಪಕ್ಷದ ಕಾರ್ಯಕರ್ತರಿಗೂ ಅಭಿಮಾನಿಗಳಿಗೂ ಈ ಸಂದರ್ಭದಲ್ಲಿ ಅಭಿನಂದಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು. 
ಈ ಸಂದರ್ಭದಲ್ಲಿ ಕರಿಯಣ್ಣ ಸಂಗಟಿ, ಶಾಂತಣ್ಣ ಮುದಗಲ್ಲ, ಜುಲ್ಲು ಖಾದ್ರಿ, ಗವಿಸಿದ್ದಪ್ಪ ಮುದಗಲ್ಲ, ಶಿವಾನಂದ ಹೊದ್ಲುರು, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ, ಮತ್ತುರಾಜ ಕುಷ್ಟಗಿ, ಮಹೇಶ ಭಜಂತ್ರಿ, ಮೌಲಾಹುಸೇನ್ ಜಮಾದಾರ, ಅನೀಕೆತ ಅಗಡಿ, ವಿಶ್ವನಾಥ ರಾಜು, ಕೃಷ್ಣಾ ಇಟ್ಟಂಗಿ, ಕಾಶಿನಾಥ ರಡ್ಡಿ, ರೂಪ್ಲಾ ನಾಯಕ,  ವೀರಣ್ಣ ಸೊಂಡುರು, ವಾಹಿದ್ ಸೋಪೂರು, ಜಾಕೀರಹುಸೇನ್ ಕಿಲ್ಲೇದಾರ, ಮಕ್ಬುಲ್ ಮನಿಯಾರ, ದೇವಪ್ಪ ಕಟ್ಟಿಮನಿ, ಅರ್ಜುನಸಾ ಕಾಟ್ವಾ, ಅರುಣ ಶೇಟ್ಟಿ, ರಫಿ ಆರ್.ಎಂ. ಮಹ್ಮದಹುಸೇನ್ ಮಂಡಲಗಿರಿ, ಬಾಲಚಂದ್ರ,ಮುನಿರ ಸಿದ್ದಕಿ, ಕರಮುದ್ದಿನ್ ಕಿಲ್ಲೇದಾರ, ಶಬ್ಬೀರ ಸಿದ್ದಕಿ, ರಾಮಮೂರ್ತಿ, ಯಲ್ಲಪ್ಪ ಕಾಟ್ರಳ್ಳಿ, ಹುಸೇನ್ ಫಿರಾ ಚಿಕನ್, ನೂರಜಾಹನಬೇಗಂ, ನೀಲಮ್ಮ, ಚನ್ನಮ್ಮ, ಯಮನೂರಪ್ಪ ನಾಯಕ, ಹಾರೂನ್‌ಖಾನ, ನವಾಜ ಹುಸೇನಿ, ಮುತ್ತು ಗಿಣಗೇರಾ, ಅಂದಾನಸ್ವಾಮಿ, ಗುಡದಪ್ಪ ಹಲಗೇರಿ ಸುರೇಶ ಕಡಿವಾಲ, ಪಕ್ಷದ ವಕ್ತಾರರಾದ ಅಕ್ಬರ ಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರ

Leave a Reply

Top