You are here
Home > Koppal News > ಮಹಾ ರಥೋತ್ಸವ ಸಾಯಂಕಾಲ ೫ ಗಂಟೆಗೆ- ಇನ್ನಿತರ ಕಾರ್ಯಕ್ರಮಗಳ ವಿವರ

ಮಹಾ ರಥೋತ್ಸವ ಸಾಯಂಕಾಲ ೫ ಗಂಟೆಗೆ- ಇನ್ನಿತರ ಕಾರ್ಯಕ್ರಮಗಳ ವಿವರ

ಮಹಾರಥೋತ್ಸವ, ಅನುಭಾವಿಗಳ ಅಮೃತ- ಚಿಂತನ ಗೋಷ್ಠಿ ಹಾಗೂ ಸಂಗೀತ 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ ದಿನಾಂಕ ೧೮-೦೧-೨೦೧೪ ರಂದು ಶನಿವಾರ ಮಹಾ ರಥೋತ್ಸವ ಸಾಯಂಕಾಲ  ೫ ಗಂಟೆಗೆ ಜರುಗುತ್ತದೆ. ಮುಂಡರಗಿ  ಪೂಜ್ಯರಾದ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಗಳು ರಥೋತ್ಸವಕ್ಕೆ ಚಾಲನೆ ನೀಡುವರು. ಅಂದು ಸಾಯಂಕಾಲ ೬-೩೦ಕ್ಕೆ ಶ್ರೀಗವಿಮಠದ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ- ಚಿಂತನ ಗೋಷ್ಠಿ ಜರುಗಲಿದೆ. ಸಾನಿಧ್ಯವನ್ನು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಹುಬ್ಬಳ್ಳಿ,  ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ ಕನಕ ಗುರು ಪೀಠ ತಿಂಥಿಣಿ ಬ್ರಿಜ್, ಶ್ರೀಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು iದ್ದಾನೀಶ್ವರ ಹಿರೇಮಠ ಕುಷ್ಟಗಿ, ಶ್ರೀಪರಮಪುಜ್ಯ ಸದ್ಗುರು ಸಂಪೂರ್ಣಾನಂದ ಮಹಾಸ್ವಾಮಿಗಳು ಇಬ್ರಾಹಿಂಪೂರ ವಹಿಸಲಿದ್ದಾರೆ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇರ್ತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ಜರುಗುತ್ತವೆ. ಜೊತೆಗೆ  ಶ್ರೀಬಾಪು ಪದ್ಮನಾಭ್, ಹರಿಹರ ಹಾಗೂ ವೃಂದದವರಿಂದ ಸಂಗೀತ ಕಾರ್ಯಕ್ರಮ, ಸದಾಶಿವಪಾಟೀಲ ಕೊಪ್ಪಳ ಇವರಿಂದ ಸುಗಮ ಸಂಗೀತವಿರುತ್ತದೆ. 
ದಿನಾಂಕ ೧೮-೦೧-೨೦೧೪ ರಂದು ಶನಿವಾರ ಮಧ್ಯಾಹ್ನ ೧ ಗಂಟೆಗೆ ಡಾಲ ಪಟಾ ( ಕತ್ತಿ ವರಸೆ)
ಕೊಪ್ಪಳ :  ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ ರಥೋತ್ಸವ ದಿನದಂದು ದಿನಾಂಕ ೧೮-೦೧-೨೦೧೪ ರಂದು ಶನಿವಾರ ಶ್ರೀಗವಿಮಠದ ಆವರಣದಲ್ಲಿ ಮಧ್ಯಾಹ್ನ ೧ ಗಂಟೆಗೆ ಡಾಲ ಪಟಾ ( ಕತ್ತಿ ವರಸೆ) ಎಂಬ ರೋಚಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀಮಲ್ಲಿಕಾರ್ಜುನ ಅಲೆಮಾರಿ ಸಂಘ, ಹುಬ್ಬಳ್ಳಿ ಈ ಸಾಹಸ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕಾರಣ ಭಕ್ತಾಧಿಗಳು ಆಗಮಿಸಿ ಈ  ಕಲೆಗೆ ಪ್ರೋತ್ಸಾಹಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಜಯಕುಮಾರ ಕವಲೂರ ಮೊಬೈಲ್ ಸಂಖ್ಯೆ ೯೭೪೨೧೬೧೭೧೦ .
ವೆಬ್‌ಸೆಟ್‌ನಲ್ಲಿ ಜಾತ್ರಾ ನೇರ ಪ್ರಸಾರ
ಕೊಪ್ಪಳ :  ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ರಥೋತ್ಸವ ಹಾಗೂ ಇತರ ಕಾರ್ಯಕ್ರಮಗಳನ್ನು ದಿನಾಂಕ ೧೮-೦೧-೨೦೧೪ ರ  ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವರೆಗೂ gavimathkoppal.com   ವೆಬ್‌ಸೆಟ್‌ನಲ್ಲಿ ನೇರಪ್ರಸಾರವನ್ನು ಮಾಡಲಾಗುತ್ತದೆ.  ದಿನಾಂಕ  ೧೯ ಹಾಗೂ ೨೦ ರಂದು ಸಹ  ಕೈಲಾಸ ಮಂಟಪದಲ್ಲಿ ಜರುಗುವ  ಎಲ್ಲ  ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಕಳೆದ ವರ್ಷ ೧೭ ರಾಷ್ಟ್ರಗಳಲ್ಲಿ ಭಕ್ತಾಧಿಗಳು ಈ ನೇರ ಪ್ರಸಾರ ವೀಕ್ಷಿಸಿದ್ದಾರೆ. ಈ ವರ್ಷವು ನೇರಪ್ರಸಾರವನ್ನು ಮಾಡಲಾಗುತ್ತದೆಂದು ವೆಬ್‌ಸಟ್ ರೂವಾರಿ  ಮಂಜುನಾಥ ಹುಲ್ಲತ್ತಿ ತಿಳಿಸಿದ್ದಾರೆ. 

Leave a Reply

Top