ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ : ಭಾರಧ್ವಾಜ್

ಅಕಾಲಿಕ ಮಳೆಯಿಂದ ನಷ್ಟಕ್ಕೊಳಗಾದ ರೈತರ ಕೈಯಲ್ಲಿ ಈಗಿರುವ ಭತ್ತವನ್ನು ಖರೀದಿಸಲು ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೂಡಲೇ ಸರಕಾರಿ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ಪ್ರಕಟಣೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.ಎಪ್ರೀಲ್‌ತಿಂಗಳಲ್ಲಿ ಅಕಾಲಿಕ ಮಳೆಯಿಂದ ದಿನಾಂಕ ೧೨ ರಿಂದ ಸುರಿಯುತ್ತಿರುವ ಮಳೆಯಿಂದ ರೈತರು ತೀವ್ರ ನಷ್ಟಕ್ಕೊಳಗಾಗಿದ್ದಾರೆ. ಭತ್ತ ಮಳೆಗೆ ನೆನೆದು ಗುಣಮಟ್ಟ ಕಳೆದುಕೊಂಡಿದೆ. ವ್ಯಾಪಾರಿಗಳು ರೈತರ ದುಸ್ಥಿತಿಯನ್ನು ತಮ್ಮ ಲಾಭಕ್ಕಾಗಿ ಬದಲಾಯಿಸಿಕೊಂಡು ಭತ್ತ ಖರೀದಿ ನಿಲ್ಲಿಸಿದ್ದಾರೆ.ರೈತರು ತಮ್ಮ ಕೈಯಲ್ಲಿದ್ದ ಮಳೆಹಾನಿಯಿಂದ ಉಳಿದ ಭತ್ತವನ್ನು ಮಾರಾಟ ಮಾಡಿಕೊಳ್ಳಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ರೈತರು ಇಂತಹ ಪರಿಸ್ಥಿತಿಯಿಂದ ಕಂಗಾಲಾಗಿ ಆತ್ಮಹತ್ಯೆ ಮಾರ್ಗಕ್ಕೆ ಇಳಿಯುತ್ತಿದ್ದಾರೆ. ಇದರಿಂದ ರೈತರನ್ನು ಉಳಿಸಲು ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು. ಭತ್ತ ಖರೀದಿ ಕೇಂದ್ರಗಳನ್ನು ತೆರೆದು ರೈತರಲ್ಲಿ ಉಳಿದ ಭತ್ತವನ್ನು ಕೂಡಲೇ ಖರೀದಿಸಬೇಕೆಂದು ಸಿಪಿಐಎಂಎಲ್ ಪಕ್ಷ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

Leave a Reply