ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮ, ಭಾರತ್ ಸೇವಾದಳದ ತಾಯಿಬೇರುಗಳು

ಕೊಪ್ಪಳ : ಬಾಲಕಿಯರ ಸ.ಸಂ. ಪ.ಪೂ ಕಾಲೇಜ ಕೊಪ್ಪಳ ಆವರಣದಲ್ಲಿ ದಿನಾಂಕ ೨೦,೨೧ ರಂದು ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ನಡೆಯಿತು. ಈಲ್ಲೆಯ ಸುಮಾರು ೨೦೦೦ ವಿದ್ಯಾರ್ಥಿಗಳು ೩೦೦ ಜನ ಶಾಖಾ ನಾಯಕ ಶಿಕ್ಷಕರು ಪಾಲ್ಗೊಂಡಿದ್ದರು. ದಿನಾಂಕ ೨೦ ರಂದು ಕಾರ್ಯಕ್ರಮವನ್ನು   ಉಮೇಶ ಪೂಜಾರ   ಉದ್ಘಾಟಿಸಿದರು. ದಿನಾಂಕ ೨೧ ರಂದು ಜರುಗಿದ ಸಮಾರೋಪ ಸಮಾರಂಭದಲ್ಲಿ  ದ್ಯಾಮಣ್ಣ ಚಿಲವಾಡಗಿ ಜಿಲ್ಲಾ ಕಾರ್ಯದರ್ಶಿಗಳು ಭಾರತ ಸೇವಾದಳ ಅಧ್ಯಕ್ಷತೆ ವಹಿಸಿದ್ದರು. ನಗರದಲ್ಲಿ ಪಥಚಲನೆಯನ್ನು ಮಂಟೆ ಲಿಂಗಾಚಾರ್ಯ ಉಪನಿರ್ದೇಶಕರು ಸಾ.ಶಿ ಇಲಾಖೆ ಕೊಪ್ಪಳ  ಉದ್ಘಾಟಿಸಿದರು ಪ್ರಾಸ್ಥಾವಿಕವಾಗಿ ಸೋಮಶೇಖರ ಹರ್ತಿ ರಾಜ್ಯಾಧ್ಯಕ್ಷರು ಕಾರ್ನಾಟಕ ರಾಜ್ಯ ಭಾರತ ಸೇವಾದಳ ತರಬೇತಿ ಪಡೆದ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರ ಮಾತನಾಡಿ ಸೇವಾ ದಳದ ಶಾಖಾನಾಯಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಸೇವಾದಳದ ಕಾರ್ಯಚಟುವಟಿಕೆಗಳ ಬಗ್ಗೆ ಹೇಳಿದರು. 

ಮುಖ್ಯ ಅಥಿತಿಗಳಾಗಿ ಆಗಮಿಸಿದ   ಕೆ.ಎಂ. ಸೈಯದ ಅಧ್ಯಕ್ಷರು ಸೈಯದ ಪೌಂಡೇಶನ್ ಕೊಪ್ಪಳ ಮಾತನಾಡಿ ರಾಷ್ಟ್ರದಲ್ಲಿ ಭಾವೈಕ್ಯತೆ ಮೂಡಿಸುವುದು ರಾಷ್ಟ್ರ ಪ್ರೇಮ ಬೆಳೆಸುವುದು ಸೇವಾದಳದ ಶಿಕ್ಷಣದಿಂದ ಮಾತ್ರ ಸಾದ್ಯವೆಂದರು. ಎಸ್.ಬಿ.ರಡ್ಡಿ ಕೇಂದ್ರ ಸಮಿತಿ ಸದಸ್ಯರು, ಶ್ರೀಮತಿ ಇಂದಿರಾ ಭಾವಿಕಟ್ಟಿ ನಗರಸಭಾ ಸದಸ್ಯರು ಸೇವಾದಳ ಜಿಲ್ಲಾ ಸಮಿತಿ ಸದಸ್ಯರು. ಶಿವಾನಂದ ಹೊದ್ಲೂರ, ಸುದರ್ಶನರಾವ್ ದೈಹಿಕ ಶಿಕ್ಷಣಾಧಿಖಾರಿಗಳು ಸಾಂದರ್ಬಿಕವಾಗಿ ಮಾತನಾಡಿದರು. ಕಿನ್ನಾಳ ಕುವೆಂಪು ಶಾಲೆ ವಿದ್ಯಾರ್ಥಿಗಳಿಂದ ಸಾರಿ ನೃತ್ಯ, ಬಾಲಕಿಯರ ಸ.ಸಂ.ಪ.ಪೂ ಕಾಲೇಜ ಕೊಪ್ಪಳದ ಮಕ್ಕಳಿಂದ ಲೋಟಸ್ , ಕಾಳಿದಾಸ ಪ್ರೌಢಶಾಲಾ ಮಕ್ಕಳಿಂದ ದ್ವಜ ಕವಾಯತ್, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಂದ ಡಂಬೇಲ್ಸ. ಲೇಜಿಮ್, ಹುಪ್ಸ, ಸಲಕರಣೆ ವ್ಯಾಯಾಮ್, ಯೋಗ ಮುಂತಾದ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸರ್ವಧರ್ಮಿಯ ಪ್ರಾರ್ಥನೆ ಸದಾಶಿವ ಪಾಟೀಲರಿಂದ ನಾಡಗೀತೆ ಜರುಗಿತು.   ಬಸನಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹೆಚ್. ಅಬ್ದುಲ್ ಅಜೀಜ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಗಾದಿಲಿಂಗಪ್ಪ ಜಿಲ್ಲಾ ಸಂಘಟಿಕರು, ಪ್ರಾಣೇಶ ಹೆಚ್. ಕೊಪ್ಪಳ, ವೀರಪಾಕ್ಷಪ್ಪ ಬನ್ನಿಗೋಳ ಯಲಬುರ್ಗಾ, ತುಳುಜಾ ನಾರಾಯಣ್ ಗಂಗಾವತಿ, ಧರ್ಮ ಕುಮಾರ ಕಂಬಳಿ ಕುಷ್ಟಗಿ, ಅಧಿನಾಯಕರುಗಳು ಹಾಗೂ ಸಿ. ವಿಶ್ವನಾಥ ತಾಲೂಕಾ ಕಾರ್ಯದರ್ಶಿ, ವಿಠಲ್ ಬೈಲವಾಡ ತಾಲೂಕ ಅಧ್ಯಕ್ಷರು ಚಿದಾನಂದ ವೀರಗಂಟಿ ಭಾಗವಹಿಸಿದ್ದರು. ಶ್ರೀ ಮುಜಗೊಂಡ ದೈಹಿಕ ಶಿಕ್ಷಕರು ನಿರೂಪಿಸಿದರು. ದೇವರ ಮನಿ ದೈಹಿಕ ಶಿಕ್ಷಕರು ವಂದಿಸಿದರು. 
Please follow and like us:
error