fbpx

ಉಮ್ರಾ ಯಾತ್ರೆಗೆ ಕೆ.ಎಂ.ಸಯ್ಯದ್ ಪ್ರಯಾಣ : ಹಲವರಿಂದ ಬೀಳ್ಕೋಡುಗೆ

 ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹಾಗೂ ಅವರ ಕುಟುಂಬ ವರ್ಗದವರು ಪವಿತ್ರ ಸ್ಥಳವಾದ ಮೆಕ್ಕಾ ಮದಿನಕ್ಕೆ ಉಮ್ರಾ ಯಾತ್ರೆ ಕೈಗೊಳ್ಳಲು ಪ್ರಯಾಣ ಬೆಳೆಸಿದರು.
ಅವರು ರವಿವಾರ ಸಂಜೆ ಕೊಪ್ಪಳದಿಂದ ವಿಆರ್‌ಎಲ್ ಬಸ್ ಮೂಲಕ ಮುಂಬೈಗೆ ತೆರಳಿ ಅಲ್ಲಿಂದ ಸೋಮವಾರ ಸಂಜೆ ವಿಮಾನದ ಮೂಲಕ ಉಮ್ರಾ ಯಾತ್ರೆಗೆ ತೆರಳಲಿದ್ದಾರೆ. ಇದರ ಪ್ರಯುಕ್ತ ರವಿವಾರ ಸಂಜೆ ಕೊಪ್ಪಳದ ಅವರ ನಿವಾಸದಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಸೇರಿ ಅನೇಕರು ಅವರ ಮನೆಗೆ ತೆರಳಿ ಸನ್ಮಾನ ಮಾಡಿ ಅವರಿಗೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೋಟ್ಟರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಯ್ಯದ್ ಜುಲ್ ಖಾದರ ಖಾದ್ರಿ, ಮರ್ಧಾನ ಅಲಿ ಅಡ್ಡೇವಾಲೆ, ಎಂ.ಪಾಷಾ ಕಾಟನ್, ಜಾಕೀರ ಹುಸೇನ ಕಿಲ್ಲೇದಾರ, ಮಾನ್ವಿಪಾಷಾ, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಹಾಜಿ ಮಹೆಬೂಬ ಅಲಿ ಸಯ್ಯದ್, ಯುವ ಸಾಹಿತಿ ಮೆಹಬೂಬ ಮುಲ್ಲಾ ಹನುಮಸಾಗರ, ಸಮಾಜ ಸೇವಕ ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ಭಾಗ್ಯನಗರ ಗ್ರಾ.ಪಂ.ಅಧ್ಯಕ್ಷ ಹೊನ್ನೂರಸಾಬ ಭೈರಾಪುರ, ಸೇರಿದಂತೆ ಅನೇಕರು ಉಪಸ್ಥಿತರಿದ್ದು ಅವರಿಗೆ ಅಭಿನಂದಿಸಿದರು.
Please follow and like us:
error

Leave a Reply

error: Content is protected !!