ರಕ್ತ ರಾತ್ರಿ ಪೌರಾಣಿಕ ನಾಟಕ ಪ್ರದರ್ಶನ

ಕೊಪ್ಪಳ : ತಾಲೂಕಾ ರಂಗಭೂಮಿ ಕಲಾವಿದರ ಸಂಘ ಹಾಗೂ ಶ್ರೀ ಅಭಿನವ ಹವ್ಯಾಸಿ ಕನ್ನಡ ಕಲಾ ಸಂಘ ಕೊಪ್ಪಳ ಇವರು ಸಂಯುಕ್ತವಾಗಿ, ರಂಗಭೂಮಿಯ ಹಿರಿಯ ಕಲಾವಿದರಾದ ಹೀರೆಮನ್ನಾಪುರದ ಕೆ. ಹುಸೇನಸಾಬ ಇವರ ಸಹಾಯಾಥವಾಗಿ ನಗರದ ಸಾಹಿತ್ಯ ಭವನದಲ್ಲಿ ಡಿ: ೧೫ ರಂದು ಶನಿವಾರ ಸಂಜೆ ೬:೦೦ ಕ್ಕೆ “ರಕ್ತ ರಾತ್ರಿ” ಪೌರಾಣಿಕ ನಾಟಕ ಪ್ರದರ್ಶಿಸುವರು. ಕೊಪ್ಪಳದ ಶಾಸಕರಾದ ಸಂಗಣ್ಣ ಕರಡಿ ಉದ್ಘಾಟಿಸುವರು. ಕೆ. ಎಂ. ಸೈಯದ್ ಮತ್ತು ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪೂರವರು ಜ್ಯೋತಿ ಬೆಳಗಿಸುವರು. ಕೆ. ರಾಘವೇಂದ್ರ ಹಿಟ್ನಾಳ ಜಿ.ಪಂ. ಅಧ್ಯಕ್ಷರು ಅಧ್ಯಕ್ಷತೆ ವಹಿಸುವರು.
    ಹೆಚ್ಚಿನ ಸಂಖೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಲಾವಿದರಿಗೆ ಸಹಾಯ ಮಾಡಿ ನಾಟಕ ಯಶಸ್ವಿಗೊಳಿಸಬೇಕೆಂದು ತಾಲೂಕ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ  ಹೆಚ್.ಎಂ, ಕೊಟ್ರಯ್ಯಸ್ವಾಮಿ  ಕೋರಿದ್ದಾರೆ.

Leave a Reply