ಸೇನಾ ಭರ್ತಿ ರ್‍ಯಾಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾಹಿತಿ.

ಕೊಪ್ಪಳ,
ಜು.೩೧  ಭಾರತೀಯ ಸೇನಾ ಭರ್ತಿಗಾಗಿ ಮುಕ್ತ ಸೇನಾ ರ್‍ಯಾಲಿ
ವ್ಯವಸ್ಥೆಯಡಿ ಅಭ್ಯರ್ಥಿಗಳು ಇನ್ನು ಮುಂದೆ ಆನ್‌ಲೈನ್ ಮೂಲಕ ಅರ್ಜಿ
ಸಲ್ಲಿಸಬಹುದಾಗಿದೆ. 
        ಬೆಂಗಳೂರಿನ ಹೆಡ್ ಕ್ವಾರ್ಟ್‌ರ್ ರಿಕ್ರೂಮೆಂಟ್
ಕಛೇರಿ ಇವರು ಮುಕ್ತ ಸೇನಾ ರ್‍ಯಾಲಿ ವ್ಯವಸ್ಥೆಯನ್ನು ಅಭ್ಯರ್ಥಿಗಳಿಗೆ ಸುಗಮಗೊಳಿಸುವ
ಸಲುವಾಗಿ ಅರ್ಜಿಗಳ ಮುಖಾಂತರ ಸೇನಾ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ೨೦೧೫ ರ
ಜೂನ್ ೧೫ ಕ್ಕೆ ಅನ್ವಯವಾಗುವಂತೆ ಇನ್ನು ಮುಂದೆ ಸೇನಾ ಭರ್ತಿಗಾಗಿ ಅಭ್ಯರ್ಥಿಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು,
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ :
೦೮೩೫೪-೨೩೫೪೩೪ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆಡಳಿತಾಧಿಕಾರಿಗಳ ನೇಮಕ
ಕೊಪ್ಪಳ
ಜು. ೩೧ (ಕರ್ನಾಟಕ ವಾರ್ತೆ) : ನೂತನವಾಗಿ ರಚನೆಯಾಗಿರುವ ಗಂಗಾವತಿ ತಾಲೂಕಿನ ಕಾರಟಗಿ
ಪುರಸಭೆಗೆ ಆಡಳಿತಾಧಿಕಾರಿಯನ್ನಾಗಿ ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಹಾಗೂ
ಕನಕಗಿರಿ ಪಟ್ಟಣ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ಗಂಗಾವತಿ ತಹಸಿಲ್ದಾರ್ ವೆಂಕನಗೌಡ
ಪಾಟೀಲ್ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆವರು ಆದೇಶ
ಹೊರಡಿಸಿದ್ದಾರೆ.
     ಗ್ರಾಮ ಪಂಚಾಯತಿಯಾಗಿದ್ದ ಕಾರಟಗಿಯನ್ನು ಇತ್ತೀಚೆಗೆ ಸರ್ಕಾರ
ಪುರಸಭೆಯನ್ನಾಗಿ ಹಾಗೂ ಕನಕಗಿರಿಯನ್ನು ಪಟ್ಟಣ ಪಂಚಾಯತಿಯನ್ನಾಗಿ
ಮೇಲ್ದರ್ಜೆಗೇರಿಸಿದೆ.  ನೂತನವಾಗಿ ರಚನೆಯಾಗಿರುವ ಕಾರಟಗಿ ಪುರಸಭೆಗೆ ಸರ್ಕಾರದ
ಸೂಚನೆಯಂತೆ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರನ್ನು ಹಾಗೂ ಕನಕಗಿರಿ ಪಟ್ಟಣ
ಪಂಚಾಯತಿಗೆ ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಅವರನ್ನು ಜು. ೩೧ ರಿಂದ
ಅನ್ವಯವಾಗುವಂತೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಕ
ಮಾಡಿದ್ದಾರೆ.

Leave a Reply