ಜೂ. ೧೧ ರಿಂದ ಕೊಪ್ಪಳ ಆರ್‌ಟಿಓ ಕಚೇರಿ ಸ್ಥಳಾಂತರ

  ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಈಗಿರುವ ಎಪಿಎಂಸಿ ಆವರಣದಲ್ಲಿನ ಕಟ್ಟಡದಿಂದ, ಕೊಪ್ಪಳ- ಹೊಸಪೇಟೆ ರಸ್ತೆಯಲ್ಲಿನ ಅಭಯ್ ಸಾಲ್ವೆಂಟ್ಸ್ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಚಂದ್ರಪ್ಪ ಹುಲ್ಲತ್ತಿ ಇವರ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.
  ಜೂ. ೧೧ ರಿಂದ ಸಾರ್ವಜನಿಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಂಬಂಧಿಸಿದ ಕೆಲಸ-ಕಾರ್ಯಗಳಿಗಾಗಿ ಕೊಪ್ಪಳ- ಹೊಸಪೇಟೆ ರಸ್ತೆಯಲ್ಲಿನ ಅಭಯ್ ಸಾಲ್ವೆಂಟ್ಸ್ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಚಂದ್ರಪ್ಪ ಹುಲ್ಲತ್ತಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಕಚೇರಿಗೆ ಭೇಟಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ. ಪಾಂಡುರಂಗ ಶೆಟ್ಟಿ ಅವರು  ತಿಳಿಸಿದ್ದಾರೆ.
Please follow and like us:
error