ರಾಷ್ಟ್ರ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ ಆ. : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿರುವ ಯುವಕ/ಯುವತಿಯರಿಗೆ ವೈಯಕ್ತಿಕ ರಾಷ್ಟ್ರ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ದಿನಾಂಕ ೦೧-೦೪-೨೦೧೦ ರಿಂದ ೩೧-೦೩-೨೦೧೧ ರವರೆಗೆ ಯುವಕ, ಯುವತಿ ಮಂಡಲ ಹಾಗೂ ಯುವಕ ಯುವತಿಯರು ಕೈಗೊಂಡಿರುವ ಸಾಧನೆಗಳ ಕುರಿತು ೩ ಪ್ರತಿಯಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವ ಯುವಕ, ಯುವತಿಯರು ೧೫ ರಿಂದ ೩೫ ವಯೋಮಿತಿ ಯೊಳಗಿರಬೇಕು. ವೈಯಕ್ತಿಕ ಪ್ರಶಸ್ತಿಗೆ ಅರ್ಜಿದಾದರರು ಯುವಕ/ಯುವತಿ ಮಂಡಳಿ ಸದಸ್ಯರಾಗಿರತಕ್ಕದ್ದು, ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಕೊಪ್ಪಳ ಇವರಿಂದ ಪಡೆದು ದಿನಾಂಕ ೩೦-೦೮-೨೦೧೧ ರೊಳಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ತಿಳಿಸಿದ್ದಾರೆ.

Leave a Reply