ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್  ಘಟಕ , ಶ್ರೀಗವಿಸಿದ್ಧಶ್ವರ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್  ಘಟಕ, ರೆಡ್ ರಿಬ್ಬನ್ ಕ್ಲಬ್, ತಾಯ್ತನ ಸುರಕ್ಷಾ ಆಂಧೋಲನ ಇವುಗಳ ಸಂಯುಕ್ತಾಶ್ರಯದಲ್ಲಿ  ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಮಹಾದೇವಸ್ವಾಮಿ ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯಾವುದೇ ವ್ಯಕ್ತಿ ಮತ್ತೊಬ್ಬರ  ಜೀವ ಉಳಿಸಲು ತನ್ನ ರಕ್ತವನ್ನು  ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಬೇಕು.  ಇದರಿಂದ  ರಕ್ತದಾನಿಗಳಿಗೆ ಯಾವುದೇ  ಅಡ್ಡ ಪರಿಣಾಮಗಳಾಗುವದಿಲ್ಲ. ಬದಲಾಗಿ ದೇಹಕ್ಕೆ ಅನೂಕೂಲ ಪರಿಣಾಮಗಳಾಗುತ್ತವೆ ಎಂದರು. ಅತಿಥಿಗಳಾಗಿ ಗಂಗಾವತಿಯ ಡಾ.ಬಿ.ಗುರುಮೂರ್ತಿ ಹಾಗು ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ಭಾಗವಹಿಸಿ ರಕ್ತದಾನದ ಸದುದ್ದೇಶಗಳ ಕುರಿತು ಮಾತನಾಡಿದರು. 

 ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ತಿಮ್ಮಾರಡ್ಡಿ ಮೇಟಿ ಮಾತನಾಡಿ  ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ಯುವಕರು ರಕ್ತದಾನ ಮಾಡುವಲ್ಲಿ ಮುಂದಾಗಬೇಕು. ರಕ್ತಾದಾನ ಮಾಡುವದರಿಂದ ದಾನಿಗಳಲ್ಲಿ ಹೊಸ ರಕ್ತ ಚಲನೆಯಾಗುತ್ದದೆ .ಇದರಿಂದ ರಕ್ತದಾನಿಗಳಲ್ಲಿ   ಚುರುಕುತನ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು. ೪೦ ವಿದ್ಯಾರ್ಥಿಗಳು  ಈ ಅಂಗವಾಗಿ ರಕ್ತದಾನ ಮಾಡಿದರು. ವೈದ್ಯರಾದ ಡಾ.ಎಸ್. ದೇಸಾಯಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರಭುರಾಜನಾಯಕ, ಸಿ.ಎಸ್.ಸಿ ಸಂರಕ್ಷಕರಾದ ಪರಮೇಶ್, ಕೆ.ರಾಘವೇಣಿ ಡ್ಯಾಪ್ಕು, ಉಪನ್ಯಾಸಕರಾದ ಸುರೇಶ ಸೊನ್ನದ, ಮಹೇಶಮಮದಾಪುರ,  ಡಾ.ಡಿ.ಎಚ್.ನಾಯಕ್, ದ್ವಾರಕಾಸ್ವಾಮಿ, ಗಾಯತ್ರಿಭಾವಿಕಟ್ಟಿ, ನಂದಾ ಕಟ್ಟಿಮನಿ, ವ್ಯವಸ್ಥಪಕರಾದ ಆದಿಬಾಬು, ಜಯಪ್ರಕಾಶ, ಶ್ಯಾಮೀದ, ಶಾರದಾ, ಸೌಮ್ಯ, ವಿನೋದ ಮುರಡಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ೨೦ ಕ್ಕೂ ಅಧಿಕ ಸಲ ರಕ್ತದಾನ ಮಾಡಿದ   ನಾಗರಾಜ ಡೊಳ್ಳಿನ್, ೮ ಸಲ ರಕ್ತದಾನ ಮಾಡಿದ ಪೃಥ್ವಿರಾಜ್ ಚಾಕಲಬ್ಬಿ, ೮ ಸಲ ರಕ್ತ ದಾನ ಮಾಡಿದ ಲಾಡ್‌ಸಾಬ್, ೪ ಸಲ ರಕ್ತ ದಾನ ಮಾಡಿದ ಮಾರುತಿ ಹಿರೇಕುರುಬರ್, ೨ ಸಲ ರಕ್ತದಾನ ಮಾಡಿದ ಮಂಜುಳಾ ನಂಜುಂಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
Please follow and like us:
error