ಜ್ಯೋತಿಷಿ ಸೋಮಯಾಜಿಯ ಬಂಧನಕ್ಕೆ ಆಗ್ರಹ.

ಯಲಬುರ್ಗಾ- ಟಿ.ವಿ ೯ ಸುದ್ಧಿ ವಾಹಿನಿಯಲ್ಲಿ ಹಡಪದ ಅಪ್ಪಣ್ಣ ಸಮಾಜವನ್ನು ನಿಂಧನೆ ಮಾಡಿದ ಜ್ಯೋತಿಷಿ ಸೋಮಯಾಜಿಯನ್ನು ಸರ್ಕಾರ ಬಂಧಿಸಬೇಕು ಎಂದು ಒತ್ತಾಯಿಸಿ, ತಾಲೂಕಿನ ಹಡಪದ ಅಪ್ಪಣ್ಣ ಸಮಾಜದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ ಶಿವಲಿಂಗಪ್ಪ ಪಟ್ಟದಕಲ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು. ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವವಸ್ಥಾನದಿಂದ ಹೊರಟ ಪ್ರತಿಭಟನಕಾರರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸೋಮಯಾಜಿ ವಿರುದ್ಧ ಘೋಷಣೆ ಕೂಗಿದರು. ಕಿತ್ತೂರು ಚನ್ನಮ್ಮ ವೃತ್ತದ ಬಳಿ ಜಮಾಯಿಸಿ, ಸೋಮಯಾಜಿಯ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ತಾಲೂಕಾಧ್ಯಕ್ಷ ಶಿವಪ್ಪ ಹಡಪದ ಮಾತನಾಡಿ, ಹಡಪದ ಸಮಾಜವನ್ನು ನಿಂಧಿಸಿ, ಜಾತಿ ನಿಂಧನೆ ಮಾಡಿದ ಸೋಮಯಾಜಿ ತನ್ನ ಹೊಟ್ಟೆ ಪಾಡಿಗಾಗಿ ಜ್ಯೋತಿಷಿ ಹೇಳುತ್ತಿದ್ದಾನೆ. ತನ್ನ ಭವಿಷ್ಯ ತನಗೆ ತಿಳಿದಿಲ್ಲ. ಬದಲಾಗಿ ಇನ್ನೊಬ್ಬರನ್ನು ನಿಂಧನೆ ಮಾಡಿ, ಸುಲುಗೆ ಮಾಡಲು ಮುಂದಾಗಿದ್ದಾನೆ. ಕ್ಷೌರಿಕ ಸಮಾಜವನ್ನು ಕೀಳರಿಮೆಯಿಂದ ಕಂಡು, ನಿಂಧನೆ ಮಾಡಿ, ಸಮಾಜದಲ್ಲಿನ ಶಾಂತಿಯನ್ನ ಕದಡಿದ್ದಾನೆ. ಇಂತಹ ಸುಳ್ಳು ಜ್ಯೋತಿಷಿಯನ್ನ ಸರ್ಕಾರ ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಮುದಾಯದಿಂದ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಎಚ್ಚರಿಸಿದರು. ಸಾಹಿತಿ ಅನ್ನಪೂರ್ಣ ಮನ್ನಾಪೂರು ಮಾತನಾಡಿ, ಹಡಪದ ಅಪ್ಪಣ್ಣವರು ಬಸವಣ್ಣನ ಕಾಲದಲ್ಲಿ ತಮ್ಮ ವೃತ್ತಿಯಲ್ಲಿಯೇ ಶರಣರೆನಿಸಿಕೊಂಡಿದ್ದಾರೆ. ಆದರೆ, ಕಪಟ ಜ್ಯೋತಿಷಿಗಳು ಸಮಾಜದಲ್ಲಿ ಮೂಡನಂಬಿಕೆ ಕಂದಚಾರಗಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮುದಾಯದವರಿಗೆ ಸಮಾಜದಲ್ಲಿ ಕೀಳು ಭಾವನೆ ಮೂಡ ತೊಡಗಿದೆ. ಕೂಡಲೇ ಇಂತಹ ಕಪಟ ಜ್ಯೋತಿಷಿಗಳನ್ನು ಸರ್ಕಾರ ಬಂಧಿಸಲು ಮುಂದಾಬೇಕು ಎಂದು ಒತ್ತಾಯಿಸಿದರು.  ಸಮುದಾಯದ ಮುಖಂಡರಾದ ಮಹಾದೇವಪ್ಪ ಹಡಪದ , ಶೇಕಪ್ಪ ಹಡಪದ , ಸಂಗಪ್ಪ ರಾಜೂರು ಹಾಗೂ ತಾಲೂಕಿನ ೫೦೦ ಕ್ಕು ಹೆಚ್ಚಿನ ಜನ ಪಾಲ್ಗೊಂಡಿದ್ದರು.

Related posts

Leave a Comment