ದುರ್ಬಲ ವರ್ಗಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು ಐಪಿಪಿಇ ಗುರಿ- ಕೃಷ್ಣ ಡಿ.ಉದಪುಡಿ.

ಕೊಪ್ಪಳ, ಅ.೦೮ (ಕ ವಾ)ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುರ್ಬಲ ವರ್ಗಗಳನ್ನು ಗುರುತಿಸಿ, ಅವುಗಳನ್ನು ಸದೃಢರರನ್ನಾಗಿ ಮಾಡುವುದೇ ತೀವ್ರ ಸಹಭಾಗಿತ್ವದ ಯೋಜನೆಯ ತಯಾರಿಕೆ (ಐಪಿಪಿಇ) ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ.ಡಿ.ಉದಪುಡಿ ಹೇಳಿದರು. 
     ಕೊಪ್ಪಳ ತಾಲೂಕಾ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಐಪಿಪಿಇ-೨ (Iಟಿಣeಟಿsive Pಚಿಡಿಣiಛಿiಠಿಚಿಣoಡಿಥಿ ಠಿಟಚಿಟಿಟಿiಟಿg exeಡಿಛಿise ) ಕಾರ್ಯಕ್ರಮದಡಿ ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಬ್ಲಾಕ್ ಯೋಜನಾ ತಂಡಗಳಿಗೆ ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ೦೪ ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಆಯ್ಕೆಮಾಡಿಕೊಳ್ಳಲು ಜನರ ಸಹಭಾಗಿತ್ವದಡಿಯಲ್ಲಿ ದುರ್ಬಲ ವರ್ಗಗಳನ್ನು ಗುರುತಿಸಿ, ಅವರನ್ನು ಆರ್ಥಿಕ ಸಧೃಢರನ್ನಾಗಿ ಮಾಡಲು ಐಪಿಪಿಇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅಲ್ಲದೆ ಎಲ್ಲ ಗ್ರಾಮ ಪಂಚಾಯತ್‌ಗಳು ಕಡ್ಡಾಯವಾಗಿ ಐಪಿಪಿಇ ಮೂಲಕವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂಬ  ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬ್ಲಾಕ್ ಯೋಜನಾ ತಂಡಗಳು ತರಬೇತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಗ್ರಾಮದ
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಯತ್ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಗ್ರಾಮೀಣ ಉಗ್ರಾಣ ನಿಗಮದ ಸಹಾಯಕ ನಿರ್ದೇಶಕ ಚಂದ್ರಶೇಖರ, ಜಿಲ್ಲಾ ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ರಾಜಕುಮಾರ ಕಾತರಕಿ, ಎಂಐಎಸ್ ಸಂಯೋಜಕ ಮಂಜುನಾಥ ಜವಳಿ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಾಮಾಜಿಕ ಪರಿಶೋಧನಾ ಸಂಯೋಜಕ ಮಹೇಶ ಗೋರಂಟ್ಲಿ, ತಾಲೂಕಾ ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕ ಸಾಬಣ್ಣ ಎಚ್.ಕೆ, ಎಸ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ಎಚ್.ಎಸ್.ಹೊನ್ನುಂಚಿ ಸೇರಿದಂತೆ ವಿವಿಧ ೩೮ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.  

ಯೋಜನೆಯ ರೂಪರೇಷೆಗಳನ್ನು ತಯಾರಿಸಲು ಶ್ರಮಿಸಬೇಕು. ಈಗಾಗಲೇ ತರಬೇತಿ ಪಡೆದಿರುವ ಬಳ್ಳಾರಿ ಜಿಲ್ಲೆಯ ಬ್ಲಾಕ್ ಸಂಪನ್ಮೂಲ ತಂಡಗಳು ತಾಲೂಕಿನ ಬ್ಲಾಕ್ ಯೋಜನಾ ತಂಡಗಳಿಗೆ ತರಬೇತಿ ನೀಡಲಿವೆ. ತರಬೇತಿಯಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ತರಬೇತಿಯ ಪ್ರಮುಖ ಅಂಶಗಳಾದ ತೀವ್ರ ಸಹಭಾಗಿತ್ವ ಮತ್ತು ಯೋಜನೆಯಲ್ಲಿ ಒಗ್ಗೂಡಿಸುವಿಕೆ ಮುಂತಾದವುಗಳ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಕೃಷ್ಣ ಉದಪುಡಿ ಅವರು ತಿಳಿಸಿದರು.

Please follow and like us:
error