You are here
Home > Koppal News > ಅಸ್ಪೃಶ್ಯತೆ ಜಾಗೃತಿ ಸಪ್ತಾಹ ಯಶಸ್ವಿ

ಅಸ್ಪೃಶ್ಯತೆ ಜಾಗೃತಿ ಸಪ್ತಾಹ ಯಶಸ್ವಿ

ಕೊಪ್ಪಳ, ಡಿ.೧೧ : ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಲಿತ ಸಾಂಸ್ಕೃತಿಕ ವೇದಿಕೆ ಕೊಪ್ಪಳ ಇವರಿಂದ ಅಸ್ಪೃಶ್ಯತೆ ಜಾಗೃತಿ ಸಪ್ತಾಹ ಹಾಗೂ ಬೀದಿ ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಅಧ್ಯಕ್ಷರಾದ ಶ್ರೀ ಯಮನೂರಪ್ಪ ಬಸಪ್ಪ ಕೋರವರ ನೇರವೇರಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ, ಗ್ರಾಮದ ಹಿರಿಯರಾದ ಹನುಮನಗೌಡ ಗೋಡಚಿಹಾಳ, ಗೂಳೆಪ್ಪ ಸಿಂದೋಗಿ, ದಲಿತ ಮುಖಂಡರಾದ ಸಿದ್ಧಪ್ಪ ಕಟ್ಟಿಮನಿ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಮಣ್ಣ ಕಂದಾರಿಯವರ ನಿರ್ದೇಶನದಲ್ಲಿ

ಅಸ್ಪೃಶ್ಯತೆ ಜಾಗೃತಿ ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಕಲಾವಿದರಾಗಿ ಶಿವಮೂರ್ತಿ ಮೇಟಿ, ಬಾಲಪ್ಪ ಮೋಟಿ, ನೀಲಪ್ಪ ಮೋಟಿ, ಮಹ್ಮದ್‌ಸಾಬ್ ಕರೀಮ್‌ಸಾಬ, ಖಾದರಸಾಬ, ರಾಮಣ್ಣ ಮುರಡಿ, ದಾವಲಸಾಬ ಅತ್ತಾರ, ಪ್ರಕಾಶ, ಅಂಬಮ್ಮ ಸಿಂಧನೂರು ಅಭಿನಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. 

Leave a Reply

Top