ಫೆ.೧೩ ರಂದು ಭಾಗ್ಯನಗರದಲ್ಲಿ ಸಂಕ್ರಾಂತಿ ಸಿರಿ

  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ತಾಲೂಕಿನ ಭಾಗ್ಯನಗರದ ಶ್ರೀಗಾನಸುಧೆ ಕಲೆ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಕ್ರೀಡಾ ಸಂಸ್ಥೆ  ಸಂಯುಕ್ತಾಶ್ರಯದಲ್ಲಿ ಗಾನಸುಧೆ ಸಂಸ್ಥೆಯ ತೃತೀಯ ವರ್ಷದ ಸಂಕ್ರಾಂತಿ ಸಿರಿಯ ಸಾಂಸ್ಕೃತಿಕ ಸ್ವರಸಂಭ್ರಮ ಕಾರ್ಯಕ್ರಮ ಫೆ.೧೩ ರ ಸಂಜೆ ೫ ಗಂಟೆಗೆ ಭಾಗ್ಯನಗರದ ಸಂತೆ ಮೈದಾನದಲ್ಲಿ ಆಯೋಜಿಸಲಾಗಿದೆ.
  ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಭಾಗ್ಯನಗರದ ಸಂಸ್ಥಾನ ಶಂಕರಾಚಾರ್ಯಮಠದ ಶ್ರೀ ಶಿವಪ್ರಕಾಶಾನಂದ ಭಾರತಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸುವರು. ಭಾಗ್ಯನಗರ ಗ್ರಾಮ ಪಂಚಾಯತ್ ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ ಕಾರ್ಯಕ್ರಮ ಉದ್ಘಾಟಿಸುವರು. ಭಾಗ್ಯನಗರದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಕೊಪ್ಪಳ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಜಿಲ್ಲಾ ಪಂಚಾಯತ್ ಸದಸ್ಯೆ ವನಿತಾ ವೀರಣ್ಣ ಗಡಾದ, ತಾಲೂಕಾ ಪಂಚಾಯತ್ ಸದಸ್ಯರಾದ ದಾನಪ್ಪ ಜಿ.ಕವಲೂರ, ಶ್ರೀನಿವಾಸ ಹ್ಯಾಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಕಿನ್ನಾಳದ ಶ್ರೀ ಷಡಕ್ಷರಯ್ಯ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ, ಗೌರವ ಕಾರ್ಯದರ್ಶಿ ಅಕ್ಬರ ಸಿ.ಕಾಲಿಮಿರ್ಚಿ, ಭಾಗ್ಯನಗರದ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಪ್ರಹ್ಲಾದ್ ಅಗಳಿ, ಸಾಹಿತಿ ಜಿ.ಎಸ್.ಗೋನಾಳ, ಭಾಗ್ಯನಗರದ ಶ್ರೀ ಬ.ಕ.ವಿ ನಾಟ್ಯ ಸಂಘದ ಅಧ್ಯಕ್ಷ ವೀರಣ್ಣ ಅಕ್ಕಸಾಲಿ, ಸಂಗೀತ ಶಿಕ್ಷಕರಾದ ವೀರೇಶ ಹಿಟ್ನಾಳ, ಸದಾಶಿವ ಪಾಟೀಲ್, ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಹೊಸಪೇಟೆಯ ಸಮಾಜ ಸೇವಕ ಖೇಮನಗೌಡ್ರ ಬಣ್ಣದ, ಯುವ ಮುಖಂಡ ಡಾ||ಕೊಟ್ರೇಶ ಶೇಡ್ಮಿ, ಡಾ||ಮಹಾಂತೇಶ ಮಲ್ಲನಗೌಡ್ರ, ಯೋಗಗುರು ಅಶೋಕಸ್ವಾಮಿ ಹಿರೇಮಠ, ವಾಣಿಜ್ಯೋದ್ಯಮಿ ವಸಂತ ಬಿ.ಪವಾರ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
ಕೊಪ್ಪಳ ತಾಲೂಕಿನ ಕುದರಿಮೋತಿಯ ಹನುಮಂತ ಕುಮಾರ ಮುಧೋಳ ಇವರು ಪರಿಶಿಷ್ಠ ಜಾತಿ ಪ್ರಾಯೋಜಿತ ಕಾರ್ಯಕ್ರಮದಡಿ ಮಂಗಲವಾದ್ಯ ಕಾರ್ಯಕ್ರಮ, ಭಾಗ್ಯನಗರದ ಶ್ರೀಮತಿ ವಿಶಾಲಾಕ್ಷಿ ಎ.ಹಿರೇಮಠ ಇವರು ಭಕ್ತಿ ಗೀತೆ ಕಾರ್ಯಕ್ರಮ ಹಾಗೂ ತಾಲೂಕಿನ ಕಿನ್ನಾಳದ ಲಚ್ಚಣ್ಣ ಹಳೇಪೇಟೆ ಇವರು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದ್ದು, ಕೊಪ್ಪಳದ ಶಿಕ್ಷಕ ವೈಶಂಪಾಯನ ಇವರು ಹಾಸ್ಯ ಮನೋರಂಜನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
Please follow and like us:
error