ಉದ್ಯೋಗ ಖಾತ್ರಿ ಯೋಜನೆ : ಕೂಲಿ ದರ ೨೦೪/-

ಕೊಪ್ಪಳ, ಏ.೦೯ (ಕರ್ನಾಟಕ ವಾರ್ತೆ) : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೫-೧೬ನೇ ಸಾಲಿನ ಕೂಲಿ ದರವನ್ನು ಕೇಂದ್ರ ಸರಕಾರ ಪರಿಷ್ಕರಿಸಿದ್ದು, ಕೂಲಿ ಮೊತ್ತ ಒಂದು ಮಾನವ ದಿನಕ್ಕೆ ೨೦೪ ರೂ. ಗೆ ಹೆಚ್ಚಿಸಲಾಗಿದೆ. 
  ಉದ್ಯೋಗಖಾತ್ರಿ ಕೂಲಿ ದರ ಪರಿಷ್ಕರಣೆ ೨೦೧೫ ರ ಏ. ೦೧ ರಿಂದ ಅನ್ವಯವಾಗಲಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಒಂದು ದಿನಕ್ಕೆ ರೂ.೧೯೧/- ರಿಂದ ರೂ.೨೦೪/- ಕ್ಕೆ ಹೆಚ್ಚಿಸಿದಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲಸಗಾರರು ಇನ್ನು ಮುಂದೆ ಒಂದು ಮಾನವ ದಿನಕ್ಕೆ ೨೦೪ ರೂ. ಕೂಲಿ ಮೊತ್ತ ಪಡೆಯಲಿದ್ದಾರೆ.  ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದ ಅನ್ವಯ ಪ್ರತಿ ಒಂದು ಮಾನವ ದಿನಕ್ಕೆ ಕೂಲಿ ಮೊತ್ತ ರೂ. ೨೦೪,  ಸಾಮಗ್ರಿ ಮೊತ್ತ ೧೩೬ ರೂ. ಸೇರಿದಂತೆ ಒಟ್ಟು ೩೪೦ ರೂ. ನಿಗದಿಪಡಿಸಲಾಗಿದೆ. ಈ ಪರಿಷ್ಕೃತ ದರವು ಏ.೦೧ ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಈಗಾಗಲೇ ನೀಡಿದ ಕಾರ್ಮಿಕ ಮುಂಗಡ ಪತ್ರದನ್ವಯ, ಪರಿಷ್ಕೃತ ದರದಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ   ಸಲ್ಲಿಸುವಂತೆ ಈಗಾಗಲೆ ಸಂಬಂಧಪಟ್ಟ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.   

Leave a Reply