ರೋಟರಿ ಕ್ಲಬ್ ಕೊಪ್ಪಳದಿಂದ ಕೃಷಿ ಪ್ರಾಯೋಗಿಕ ಪರೀಕ್ಷೆಗಾಗಿ ತರಬೇತಿ

ಕೊಪ್ಪಳ ಮೇ. ೧೪ : ಕರ್ನಾಟಕ ಕೃಷಿ/ತೋಟಗಾರಿಕೆ/ಪಶು ಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕ ಪದವಿಗೆ ಕೃಷಿಕರ ಕೋಟಾದಡಿಯಲ್ಲಿ ನಿಗದಿಪಡಿಸಿರುವ ಸ್ಥಾನಗಳಿಗೆ ಆಯ್ಕೆ ಬಯಸುವ ವಿದ್ಯಾರ್ಥಿಗಳಿಗಾಗಿ ತರಬೇತಿಯನ್ನು ಮೇ. ರಂದು ಬೆಳಿಗ್ಗೆ ೯.೦೦ ರಿಂದ ೫.೦೦ ಗಂಟೆಯವರೆಗೆ ರೋಟರಿ ಕ್ಲಬ್ ಕೊಪ್ಪಳ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನ ಆವರಣದಲ್ಲಿ (ಪ್ರವಾಸಿ ಮಂದಿರದ ಎದುರು) ನಡೆಸಲಾಗುವುದು.  
  ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗಾಗಿ ೯೪೪೮೧೯೦೮೬೮, ೯೯೮೬೫೭೬೧೬೨, ೯೮೮೬೦೩೬೮೬೪ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷ ವೀರಣ್ಣ ಕಮತರ್   ತಿಳಿಸಿದ್ದಾರೆ.
Please follow and like us:
error