ಸೈಯದ್ ಟ್ರಸ್ಟ್ ನಿಂದ ಉಚಿತ ಕುಡಿಯುವ ನೀರಿನ ಸೇವೆಗೆ ಗವಿಶ್ರೀಗಳಿಂದ ಛಾಲನೆ

ಕೊಪ್ಪಳ, ಏ. ೯. ನಗರದ ಜೆಡಿಎಸ್ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ. ಸೈಯದ್ ತಮ್ಮ ಸೈಯ್ಯದ್ ಫೌಂಡೇಷನ್ ಛಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಪ್ಪಳ ಜನರಿಗೆ ಉಚಿತ ಕುಡಿಯುವ ನೀರಿನ ಸೇವೆ ಆರಂಭಿಸಿದ್ದಾರೆ.
ನಗರದ ಹಮಾಲರ ಕಾಲೋನಿಯಲ್ಲಿ ಇಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಇದಕ್ಕೆ ಚಾಲನೆ ಕೊಟ್ಟು, ಸೈಯ್ಯದ್ ಟ್ರಸ್ಟ್ ನ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗುವಂತಹದ್ದು, ಮತ್ತಷ್ಟು ಕೆಲಸ ಮಾಡಲು ಗವಿಸಿದ್ಧ ಆಶೀರ್ವಧಿಸಲಿ ಎಂದು ಹೇಳಿದರು. ಈಗ ೨ ನೀರಿನ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡಲಾಗುತ್ತಿದೆ. ನಂತರ ಇನ್ನಷ್ಟು ಸೇವೆ ವಿಸ್ತರಿಸುವದಾಗಿ ಕೆ. ಎಂ. ಸೈಯ್ಯದ್ ಹೇಳಿದರು. ಈ ಸಂದರ್ಭದಲ್ಲಿ ವೆಂಕನಗೌಡ ಪಾಟೀಲ್ ಹೊರತಟ್ನಾಳ, ಬತ್ತಿ ಮಲ್ಲಣ್ಣ ಪಲ್ಲೇದರ, ಮಹ್ಮದ್ ಸಾಧಿಖ ಶೇಖ್, ಶೌಕತ್ ಅಲಿ, ಮಹಿಬೂಬ್ ಮಚ್ಚಿ, ಪೀರಸಾಬ್ ಬೆಳಗಟ್ಟಿ, ಅಜ್ಜು ಖಾದ್ರಿ, ಇಮಾಮಸಾಬ್ ಮಕಾಂದಾರ್, ರಾಮಣ್ಣ ಕಲ್ಲನವರ, ಎಸ್. ಎ. ಗಫಾರ್, ನಾಗರಾಜ ಅಡ್ಯಾಲ, ಯಲ್ಲಪ್ಪ ಬಿಸರಳ್ಳಿ, ಅಲಿಸಾಬ, ಮಹಾಂತೇಶ ಇತರರು ಇದ್ದರು ಎಂದು ಜಿಡಿಎಸ್ ಜಿಲ್ಲಾ ಯುವ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.

Please follow and like us:
error