ಯಡಿಯೂರಪ್ಪರಿಂದ ಪ್ರಾದೇಶಿಕ ಪಕ್ಷ?

 : ವರಿಷ್ಠರಿಗೆ ಕೊನೆಯ ಅವಕಾಶ : ಬಿಎಸ್‌ವೈಯಿಂದ ಮತ್ತೆ ದಿಲ್ಲಿಯಾತ್ರೆ
  ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಪದಚ್ಯುತಗೊಳಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಪಟ್ಟನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯೊಳಗೆ ಸರಕಾರದ ಭವಿಷ್ಯ ತೀರ್ಮಾನಿಸಲಿದ್ದಾರೆ. ತಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ತಾವು ಕರ್ನಾಟಕ ಬಿಜೆಪಿ ಪಕ್ಷ ಸ್ಧಾಪಿಸುವುದು ನಿಶ್ಚಿತ. ಆ ಮೇಲೆ ನಮ್ಮ ದಾರಿ ನಮಗೆ, ನಿಮ್ಮದಾರಿ ನಿಮಗೆ ಎಂದು ಯಡಿಯೂರಪ್ಪ ವರಿಷ್ಠರಿಗೆ ಖಡಾಖಂಡಿತ ವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಇಲ್ಲವೆ ಯಾವುದೇ ಹುದ್ದೆಗಾಗಿ ವರಿಷ್ಠರ ಮುಂದೆ ಅಂಗಲಾಚುವುದಿಲ್ಲ ಎಂದು ಹೇಳಿ 48 ಗಂಟೆಗಳು ಕಳೆಯುವ ಮುನ್ನವೇ ಇಂದು ದಿಢೀರ್ ದೆಹಲಿ ಯಾತ್ರೆ ಕೈಗೊಂಡಿರುವ ಯಡಿಯೂರಪ್ಪ, ತಮ್ಮ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಬಜೆಟ್ ಮಂಡನೆಗಾಗಿ ಸದಾನಂದಗೌಡರಿಗೆ ಅವಕಾಶ ಕಲ್ಪಿಸಬಾರದು.
ಇದೇ 18 ರೊಳಗೆ ಹೈಕಮಾಂಡ್‌ನಿಂದ ಸೂಕ್ತ ತೀರ್ಮಾನ ಹೊರ ಹೊಮ್ಮಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರ ಬಜೆಟ್‌ಮಂಡನೆಗೆ ಸಹಕಾರ ನೀಡಬೇಡಿ ಎಂಬ ಸಂದೇಶ ತಮ್ಮ ಬೆಂಬಲಿಗ ಸಚಿವರಿಗೆ ಈಗಾಗಲೇ ರವಾನಿಸಿರುವ ಯಡಿಯೂರಪ್ಪ, ತಮ್ಮಿಂದಿಗೆ ಮಾತುಕತೆ ನಡೆಸಿ ಬೇಡಿಕೆಗಳಿಗೆ ಮಣಿದರೆ ಎಲ್ಲವೂ ಸುಗಮವಾಗಿರುತ್ತದೆ ಎಂದು ಯಡಿಯೂರಪ್ಪ ದಿಲ್ಲಿ ನಾಯಕರಿಗೆ ಹೇಳಿದ್ದಾರೆ. ಒಂದು ವೇಳೆ ಸದಾನಂದಗೌಡರು ಬಜೆಟ್ ಮಂಡಿಸುವ ಪರಿಸ್ಧಿತಿ ನಿರ್ಮಾಣವಾದರೆ ಅದು ಪೂರ್ಣ ಬಜೆಟ್ ಆಗಿರಬಾರದು. ಅದು ಲೇಖಾ ನುದಾನ, ವೇತನಾನುದಾನಕ್ಕೆ ಮಾತ್ರ ಸೀಮಿತ ವಾಗಿರಬೇಕು. ಇಲ್ಲವಾದಲ್ಲಿ ಬಜೆಟ್ ಮಂಡನೆಗೂ ಮುನ್ನವೇ ಸರಕಾರ ಪತನಗೊಳ್ಳಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ತಾನು ಬಜೆಟ್ ಮಂಡಿಸಲು ಸಾಧ್ಯವಾಗ ದಿದ್ದರೂ ಪರವಾಗಿಲ್ಲ. ಸದಾನಂದಗೌಡರಿಗೆ ಅಂತಹ ಭಾಗ್ಯ ದೊರೆಯಬಾರದು. ಹೀಗೆ ಭರವಸೆ ದೊರೆ ತರೆ ವೇತನ ಮತ್ತು ಲೇಖಾನುದಾನ ಪಡೆಯಲು ಅವಕಾಶ ಕಲ್ಪಿಸುತ್ತೇನೆ. ಇಲ್ಲವಾದಲ್ಲಿ ಇಲ್ಲ ಎಂದು ಯಡಿಯೂರಪ್ಪ ವರಿಷ್ಠರಿಗೆ ತಿಳಿಸಿರು ವುದಾಗಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಮೇಲ್ಮನೆ ಸದಸ್ಯರಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನವೇ ಸದಾನಂದಗೌಡರನ್ನು ಪದಚ್ಯುತಗೊಳಿಸಬೇಕಿತ್ತು. ಆಗ ಮಾಡಿದ ತಪ್ಪಿನ ಫಲವನ್ನು ಈಗ ಅನುಭವಿಸುವಂತಾಗಿದೆ. ಆದರೀಗ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಿದರೆ ತಮಗೆ ತೀವ್ರ ಹಿನ್ನಡೆಯಾಗಲಿದೆ. ಅದಕ್ಕಾಗಿ ಇದೇ 16 ರ ನಂತರ ತಮ್ಮ ಬೆಂಬಲಿಗರ ನಿರ್ಣಾಯಕ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಯಡಿಯೂರಪ್ಪ ಬಯಸಿದ್ದಾರೆ. ದಿಲ್ಲಿಯಲ್ಲಿ ಯಡಿಯೂರಪ್ಪ ಪಕ್ಷದ ಕೆಲ ನಾಯಕರ ಜತೆ ಮಾತುಕತೆ ನಡೆಸಿದ್ದು, ತಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ತಾವು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆದಿರುವ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಎಸ್.ಆರ್. ಹಿರೇಮಠ್, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾದ ಅರ್ಜಿ ಬರುವ ಶುಕ್ರವಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಇದನ್ನು ನೋಡಿಕೊಂಡು ಯಡಿಯೂರಪ್ಪ ಮುಂದಿನ ಹೆಜ್ಜೆ ಇಡಲಿದ್ದಾರೆ. ಸುಪ್ರೀಂ ಕೋರ್ಟ್ ತನಗೆ ಉರುಳಾಗುವ ತೀರ್ಪು ನೀಡಿದರೆ ಆಗ ಸದಾನಂದಗೌಡರನ್ನು ಕೆಳಗಿಳಿಸಿ, ತಮಗೆ ನಿಷ್ಠರಾಗಿರುವ ಗ್ರಾಮೀಣಾಭಿವದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಧಾನಕ್ಕೆ ತಂದು ಕೂರಿಸಿ, ತಮಗೆ ಬೆಂಬಲ ನೀಡುತ್ತಿರುವ ಗಹ ಸಚಿವ ಆರ್. ಅಶೋಕ್‌ರನ್ನು ಉಪಮುಖ್ಯಮಂತ್ರಿ ಸ್ಧಾನಕ್ಕೆ ತರುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ. ಒಂದು ವೇಳೆ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದರೆ ಮುಖ್ಯಮಂತ್ರಿ ಹುದ್ದೆಯನ್ನು ತಮಗೇ ನೀಡಬೇಕು. ಬಜೆಟ್‌ನ್ನು ತಾವೇ ಮಂಡಿಸುವುದಾಗಿ ಯಡಿಯೂರಪ್ಪ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಈ ಮಧ್ಯೆ ದಿಲ್ಲಿಯ ಕೆಲ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಸಂತೈಸಲು ಹರಸಾಹಸ ಪಡುತ್ತಿದ್ದು, ಸುಪ್ರೀಂ ಕೋರ್ಟ್ ತೀರ್ಪು ಯಾವ ರೀತಿ ಬರಲಿದೆ ಎಂಬುದನ್ನು ನೋಡಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸಂಯದಿಂದ ಕಾಯುವಂತೆ ಸೂಚಿಸಿರುವುದಾಗಿ ಇದೇ ಮೂಲಗಳು ಹೇಳಿವೆ. ಯಡಿಯೂರಪ್ಪ ಅವರು ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಎದುರು ನೋಡುತ್ತಿದ್ದು, ವ್ಯತಿರಿಕ್ತ ತೀರ್ಪು ಹೊರ ಹೊಮ್ಮಿದರೆ ಇದೇ 18 ರ ವೇಳೆಗೆ ಶಾಸಕಾಂಗ ಪಕ್ಷದ ಸಭೆ ಕರೆದು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ. ಶೆಟ್ಟರ್ ಪ್ರತಿಕ್ರಿಯೆ: ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವದ್ಧಿ ಸಚಿವ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರು ಯಾವ ಉದ್ದೇಶಕ್ಕಾಗಿ ದೆಹಲಿಗೆ ತೆರಳಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಈ ಬಾರಿಯ ಬಜೆಟ್‌ನ್ನು ಯಾರು ಮಂಡಿಸಲಿದ್ದಾರೆ ಎನ್ನುವ ಪ್ರಶ್ನೆಗೆ, ಬಿಜೆಪಿ ಮುಖ್ಯಮಂತ್ರಿ ಮಂಡಿಸಲಿದ್ದಾರೆ ಎಂದರು. ಅಂತಹ ಭಾಗ್ಯ ನಿಮ್ಮದಾಗುತ್ತದೆಯೇ ಎಂದರೆ ತಮಗೆ ಗೊತ್ತಿಲ್ಲ. ಬಿಜೆಪಿ ಮುಖ್ಯಮಂತ್ರಿಯಿಂದ ಮುಂಗಡಪತ್ರ ಮಂಡನೆಯಾಗಲಿದೆ ಎಂದರು.  varthabharati
Please follow and like us:
error

Related posts

Leave a Comment