ಡಾ. ಚಂದ್ರಶೇಖರ ಕಂಬಾರವರನ್ನು ಅ ಭಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ವಿಶ್ವಕರ್ಮ ಸಮಾಜ ಒತ್ತಾಯ

ಕೊಪ್ಪಳ: ೦೩: ಗಂಗಾವತಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಚಂದ್ರಶೇಖರ ಕಂಬಾರವರನ್ನು  ಆಯ್ಕೆಮಾಡಲು ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜ ಒತ್ತಾಯಿಸಿದೆ. ಇಂದು ಕೊಪ್ಪಳದ ಸಿರಸಪ್ಪಯ್ಯನ ಮಠದಲ್ಲಿ ಶೇಷಪ್ಪಯ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಣಯ ಕೈಕೊಳ್ಳಲಾಯಿತು. 
ಹಂಪಿ ಕನ್ನಡ ವಿಶವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿಶ್ವಕರ್ಮ   ಸಮಾಜದ ಧೀಮಂತ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರವರನ್ನು ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಸಮಾಜದ ಹಿರಿಯರು ಹಾಗೂ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೆಶಕರಾದ ಮಂಟೇಲಿಂಗಾಚಾರ,  ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗಲಿಂಗಪ್ಪ ಪತ್ತಾರ, ಕೊಪ್ಪಳ ತಾಲೂಕ ಅಧ್ಯಕ್ಷರಾದ ರುದ್ರಪ್ಪ ಬಡಗೇರ, ಗಂಗಾವತಿ ತಾಲೂಕ ಅಧ್ಯಕ್ಷರಾದ ರವಿಶಂಕರ, ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಈಶಪ್ಪ ಬಡಗೇರ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಎಚ್ಚರಪ್ಪ ಬಡಗೇರ, ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾ ಖಜಾಂಚಿಗಳಾದ ಡಿ.ಎಂ ಬಡಿಗೇರ ಮುಂತಾದವರು ಒತ್ತಾಯಿಸಿದರು. 
Please follow and like us:

Related posts

Leave a Comment