You are here
Home > Koppal News > ದೇಶದೆಲ್ಲೆಡೆ ಬೆಂಬಲ

ದೇಶದೆಲ್ಲೆಡೆ ಬೆಂಬಲ

ಹೊಸದಿಲ್ಲಿ, ಆ.16: ಅಣ್ಣಾ ಹಝಾರೆ ಮತ್ತವರ ಬಳಗದ ವಿರುದ್ಧ ದಿಲ್ಲಿ ಪೊಲೀಸರು ನಡೆಸಿದ ನಸುಕಿನ ದಮನ ಕಾರ್ಯಾಚರಣೆಗೆ ದೇಶಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು, ವಿವಿಧ ವರ್ಗಗಳ ಜನರು ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಪ್ರಬಲ ಲೋಕಪಾಲ ಮಸೂದೆಯ ಬಗ್ಗೆ ಹಝಾರೆಯವರ ಬೇಡಿಕೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಹಝಾರೆಯವರ ತವರು ರಾಜ್ಯ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಪೂರ್ವ, ಉತ್ತರ ಹಾಗೂ ದಕ್ಷಿಣ ಭಾರತದ ವಿವಿಧ ಕಡೆಗಳಲ್ಲಿ ಜನರು ಬೀದಿಗಿಳಿದು ಅಣ್ಣಾ ಬಂಧನವನ್ನು ಪ್ರತಿಭಟಿಸಿದ್ದಾರೆ. ತಮ್ಮ ಜಾನುವಾರುಗಳೊಂದಿಗೆ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ವಾಹನ ಸಂಚಾರ ಅಸ್ತವ್ಯಸ್ತಗೊಳಿಸಿದರು.

Leave a Reply

Top