ನಗರದಲ್ಲಿನ ಹಂದಿಗಳನ್ನು ಸ್ಥಳಾಂತರಿಸಲು ಸೂಚನೆ

 ಕೊಪ್ಪಳದಲ್ಲಿರುವ ಹಂದಿಗಳನ್ನು ನಗರದಿಂದ ೫ ಕಿ.ಮೀ. ದೂರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ಹಂದಿ ಮಾಲಿಕರಿಗೆ ಸೂಚನೆ ನೀಡಿದ್ದಾರೆ.
        ರಾಜ್ಯಾದ್ಯಂತ ತಲ್ಲಣ ಮೂಡಿಸಿರುವ ಹೆಚ್೧ಎನ್೧ ಖಾಯಿಲೆಯು ರಾಜ್ಯದ ವಿವಿಧೆಡೆ ಹರಡುತ್ತಿದ್ದು, ಮಾದ್ಯಮಗಳ ವರದಿಯಂತೆ ಇದುವರೆಗೂ ರಾಜ್ಯಾದ್ಯಂತ ೯ ಪ್ರಕರಣಗಳು

ಬೆಳಕಿಗೆ ಬಂದಿವೆ ಅಲ್ಲದೇ ವಿಜಯಪುರದಲ್ಲಿ ಈ ಖಾಯಿಲೆ ಒಬ್ಬನನ್ನು ಬಲಿಪಡೆದಿದೆ.  ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ.  ಕಾರಣ ಎಲ್ಲ ಹಂದಿ ಮಾಲೀಕರು ತಮ್ಮ ಹಂದಿಗಳನ್ನು ನಗರದಿಂದ ೫ ಕಿ.ಮೀ, ದೂರದ ಹೊರ ವಲಯಕ್ಕೆ ಸ್ಥಳಾಂತರಿಸಿ, ಸಾಕಾಣಿಕೆ ನಡೆಸಬೇಕು. ಇಲ್ಲವಾದಲ್ಲಿ ಹಂದಿ ಮಾಲೀಕರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Please follow and like us:
error