ಶಾಸಕ ಮುನಿರಾಜು ವಿರುದ್ದ ಎಫ್‌ಐ‌ಆರ್ ದಾಖಲು

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐ‌ಆರ್ ದಾಖಲಿಸಿದ್ದಾರೆ.
ಯಶವಂತಪುರ ಹೋಬಳಿ ಕೆರೆ ಗುಡ್ಡದ ಹಳ್ಳಿಯಲಿ 1 ಎಕರೆ 15 ಗುಂಟೆ ಜಮೀನನ್ನು ಮುನಿರಾಜು ಅವರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಕುಟುಂಬದವರಿಗೆ ಮಾರಿದ್ದಾರೆ ಎಂಬುದು ಮುನಿರಾಜು ಮೇಲಿರುವ ಆರೋಪ. ಇದಕ್ಕೆ ಸಂಬಂಧಿಸಿದಂತೆ ಮುನಿರಾಜು ಹಾಗೂ ಐವರ ವಿರುದ್ಧ ಪುಟ್ಟಸ್ವಾಮಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ದಾಖಲೆ ತಿದ್ದಿ ಭೂ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯವು ಮುನಿರಾಜು ವಿರುದ್ಧ ಭ್ರಷ್ಟಾಚಾರ ಕಾಯಿದೆಯಡಿ ತನಿಖೆ ನಡೆಸಲು ಸೂಚಿಸಿದೆ.

Leave a Reply