fbpx

ಟಿ.ವಿ.,ಸಿನೆಮಾ ಮಾಧ್ಯಮಗಳಿಂದ ನಾಟಕಗಳು ಮಾಯವಾಗುತ್ತಿವೆ : ಬಾಳಪ್ಪ ಬಾರಕೇರ

ಕೊಪ್ಪಳ : ನಾಟಕಗಳು ಜೀವನದ ಸಂವಾದಗಳನ್ನು ಬಿಂಬಿಸುತ್ತವೆ ಅಂತಹ ರಂಗಭೂಮಿಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಇಂದಿನ ಟಿ.ವಿ.,ಸಿನೆಮಾ ಮುಂತಾದ ಮಾಧ್ಯಮಗಳಿಂದ ನಾಟಕಗಳು ಅಧೋಗತಿಗೆ ಬಂದಿವೆ ಮತ್ತು ಮಾಯವಾಗುತ್ತಿವೆ ಎಂದು ಕೊಪ್ಪಳ ನಗರಸಭಾ ಉಪಾದ್ಯಕ್ಷ ಬಾಳಪ್ಪ ಬಾರಕೇರ ಹೇಳಿದರು. 
        ನಗರದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ  ಕನ್ನಡನೆಟ್ ಡಾಟ್ ಕಾಂ-ಕವಿ ಸಮೂಹ ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ನಾಟಕಗಳು ಕಣ್ಮರೆಯಾಗುತ್ತಿದ್ದು ,ಸಿನಿಮಾಗಳನ್ನು ನೋಡುವ ಬದಲು ನಾಟಕಗಳನ್ನು ನೋಡಿದರೆ ರಂಗಭೂಮಿಯನ್ನು ಉಳಿಸಿದಂತಾಗುತ್ತದೆ ,ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು.
       ನಗರಸಭೆಯ ಅಧ್ಯಕ್ಷೆ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ ಹಾರ್ಮೋನಿಯಂ ನುಡಿಸುವುದರ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕಾರ್ಯಕ್ರಮ ಕುರಿತು ಕನ್ನಡನೆಟ್.ಕಾಂ ಸಂಪಾದಕ ಸಿರಾಜ್ ಬಿಸರಳ್ಳಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. .ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಉಪನ್ಯಾಸ ನೀಡಿದರು. ಹಿರಿಯ ರಂಗಕರ್ಮಿ ಬಾಬಣ್ಣ ಕಲ್ಮನಿ ವಿಶ್ವರಂಗಭೂಮಿ ಸಂದೇಶ ವಾಚನ ಮಾಡಿದರು. ರಂಗ ನಿರ್ದೇಶಕ  ಶಿವನಾಯಕ ದೊರೆ ಹಾಗೂ ಹಿರಿಯ ರಂಗ ಕಲಾವಿದ ಮಾಬುಸಾಬ ಹಿರೇಮಸೂತಿಯವರಿಗೆ ಸನ್ಮಾನಿಸಲಾಯಿತು.       
       ಈ ಸಂಧರ್ಭದಲ್ಲಿ ಕನ್ನಡ ಸಂಸೃತಿ ಇಲಾಖೆ ಸಹಾಯಕ ನಿರ್ದೇಶಕ ಕೋಟ್ರಪ್ಪ ಚೋರನೂರು ತಮ್ಮ ರಂಗಾಭಿನಯದ ಮೂಲಕ ಸಭಿಕರ ಗಮನಸೆಳೆದರು. ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸಯ್ಯದ್ ಜುಲ್ಲುಖಾದರ್ ಖಾದ್ರಿ, ಬಾಬಣ್ಣ ಕಲ್ಮನಿ, ಅಭಿನೇತ್ರಿ ಕಲಾಬಳಗ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ , ರಂಗ ಕಲಾವಿದ ಶಂ.ನಿ.ತಿಮ್ಮನಗೌಡ್ರ ಮಾತನಾಡಿದರು.  
ಜೀವನಸಾಬ ಬಿನ್ನಾಳ,ಮಹೆಬೂಬ,ನಾರಾಯಣ ಜೋಷಿ,ಕೊಟ್ರಯ್ಯಸ್ವಾಮಿ ಹುಲಿಗಿ, ಶೀಲಾ ಹಾಲ್ಕುರಿಕೆ ರಂಗಗೀತೆಗಳನ್ನು ಹಾಡಿದರು. ನಂತರ ರಂಗ ಕವಿಗೋಷ್ಠಿ ನಡೆಯಿತು. ವಿಠ್ಠಪ್ಪ ಗೋರಂಟ್ಲಿ,ಅಲ್ಲಾಗಿರಿರಾಜ್ ಕನಕಗಿರಿ , ಡಾ.ಶಿವಕುಮಾರ ಮಾಲೀಪಾಟಿಲ್. ರಮೇಶ ಗಬ್ಬೂರ, ಎಸ್.ಕೆ.ದಾನಕೈ ,ಮಲ್ಲಿಕಾರ್ಜುನ ಹಡಪದ ,ಶಾಂತಾದೇವಿ ಹಿರೇಮಠ ,ಪುಷ್ಪಲತಾ ಏಳುಭಾವಿ ಅರುಣಾ ನರೇಂದ್ರ,ನಟರಾಜ ಸವಡಿ, ಕೆ.ಸತ್ಯನಾರಾಯಣ ರಾವ್, ವಿಮಲಾ ಇನಾಂದಾರ್, ಮಹಾಲಕ್ಷ್ಮೀ, ದಯಾನಂದ, ವೀರಣ್ಣ ವಾಲಿ,ಮೌನೇಶ ಬಡಿಗೇರ,ವಿಜಯ ಅಮೃತರಾಜ್,ರಾಕೇಶ ಕಾಂಬ್ಳೇಕರ್,ಸರೋಜಾ ಬಾಕಳೆ, ಡಿ.ಎಂ.ಬಡಿಗೇರ,ಅಕ್ಬರ್ ಕಾಲಿಮಿರ್ಚಿ, ಶ್ರೀಮತಿ ವೈಷ್ಣವಿ,ಕಲಾವತಿ ಕುಲಕರ್ಣಿ ಸೇರಿದಂತೆ ಇಪ್ಪತೈದಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕಾರ‍್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರ,ಎಸ್.ಎಚ್.ಪಾಟೀಲ, ಮಹಾಂತೇಶ ಮಲ್ಲನಗೌಡ್ರ, ರಾಜಾಬಕ್ಷಿ ಎಚ್.ವಿ., ಮಹೇಶ ಬಳ್ಳಾರಿ, ಶಿವಾನಂದ ಹೊದ್ಲೂರ, ಹಾಗೂ ಕೊಪ್ಪಳ ತಾಲೂಕ ಕಲಾವಿದರ ಸಂಘದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.  ಕಾರ‍್ಯಕ್ರಮಕ್ಕೆ ಸ್ವಾಗತ ಮತ್ತು ನಿರೂಪಣೆಯನ್ನು ಕವಯತ್ರಿ ಅನಸೂಯಾ ಜಹಾಗೀರದಾರ ನೆರವೇರಿಸಿದರು. ಕೊನೆಯಲ್ಲಿ ಸಿರಾಜ್ ಬಿಸರಳ್ಳಿ ವಂದಿಸಿದರು. 
                  
Please follow and like us:
error

Leave a Reply

error: Content is protected !!