ಹಿರಿಯ ಛಾಯಾಗ್ರಾಹಕ ಶ್ರೀಪಾದರಾವ್ ಪದಕಿ ನಿಧನ

ಕೊಪ್ಪಳದ ಹಿರಿಯ ಛಾಯಾಗ್ರಾಹಕರು ಹಾಗೂ ಲಕ್ಷ್ಮೀ ಆರ್ಟ್ಸ ಫೋಟೋ ಸ್ಟುಡಿಯೋ ಮಾಲಿಕರಾದ ಶ್ರೀಪಾದರಾವ್ ಗೋವಿಂದರಾವ್ ಪದಕಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥತೆಯಿಂದ ಅವರು ಇಂದು ಬೆಳಿಗ್ಗೆ (೧೮-೬-೨೦೧೧ರಂದು) ನಿಧನರಾದರು. ಅವರು ಕಳೆದ ೫೦ಕ್ಕೂ ಹೆಚ್ಚು ವರ್ಷಗಳಿಂದ ಕೊಪ್ಪಳದಲ್ಲಿ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿದ್ದರು.
ಅವರ ನಿಧನಕ್ಕೆ ಕೊಪ್ಪಳ ತಾಲೂಕ ಫೋಟೋಗ್ರಾಫರ್‍ಸ್ ಅಸೋಶಿಯನ್‌ನ ಅಧ್ಯಕ್ಷರು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನಕ್ಕೆ ಕರಿಷ್ಮಾ ಫೋಟೋ ಸ್ಟುಡಿಯೋದ ಸಿರಾಜ್ ಬಿಸರಳ್ಳಿ, ವಸ್ತ್ರದ ಸ್ಟುಡಿಯೋದ ವಿಜಯಕುಮಾರ ವಸ್ತ್ರದ, ಸುನೀಲ್ ಪ್ರಿಂಟ್ಸ್ ನ ಸುನೀಲ್, ಶ್ರೀನಿವಾಸ ಫೋಟೋ ಸ್ಟುಡಿಯೋದ ಕನಕಪ್ಪ ದಲಬಂಜನ, ಅಮುಲ್, ಕೃಷ್ಣಸಾ ಹಾಗೂ ಕೊಪ್ಪಳದ ಸಮಸ್ತ ಫೋಟೋಗ್ರಾಫರ್‍ಸ್ ಶೋಕ ವ್ಯಕ್ತಪಡಿಸಿದ್ದಾರೆ.
Please follow and like us:
error