ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿ

ಕೊಪ್ಪಳ ಜು. ೨೫ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ  ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿಯನ್ನು ಭಾಗ್ಯನಗರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
     ಈ ಕಾರ್ಯಕ್ರಮದಲ್ಲಿ  ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿಯ ಜೊತೆಗೆ, ವಿವಿಧ ಸಂಸ್ಕರಣ ಪದಾರ್ಥಗಳ ಪ್ರಾತ್ಯಕ್ಷಿತೆ ಮಾಡಲಾಯಿತು.  ಕವಿತ ಉಳ್ಳಿಕಾಶಿ, ವಿಷಯ ತಜ್ಞರು, ಗೃಹ ವಿಜ್ಞಾನ ಇವರು ತರಬೇತಿಯ ಮಹತ್ವ ತಿಳಿಸುತ್ತಾ ಎಲ್ಲಾ ಮಹಿಳೆಯರಿಗೆ ಇದರ ಪ್ರಯೋಜನ ಪಡೆಯಲು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮ, ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಹಿರೇಮನಿ,   ಇವರು ತರಬೇತಿಯಲ್ಲಿ ಹಾಜರಿದ್ದು ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು.

Related posts

Leave a Comment