ಜಿಲ್ಲಾ ನಾಗರಿಕರ ವೇದಿಕೆಗೆ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಕಾಶ ದೇಸಾಯಿ

ಕೊಪ್ಪಳ,ಜು.೧೨: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಆಗಸ್ಟ್ ೨೪ ರಿಂದ ೬ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವವನ್ನು ಆಚರಿಸುವ ಹಿನ್ನಲೆಯಲ್ಲಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾಗರಿಕರ ವೇದಿಕೆಗೆ ಜಿಲ್ಲಾ ಉಪಾಧ್ಯಕ್ಷರಾಗಿ ಕುಕನೂರಿನ ಪ್ರಗತಿಪರ ರೈತ ಹಾಗೂ ಸಮಾಜ ಸೇವಕರಾದ ಪ್ರಕಾಶ ದೇಸಾಯಿ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅಧ್ಯಕ್ಷ ಮಹೇಶ ಬಾಬು ಸುರ್ವೆ ಅವರು ತಿಳಿಸಿದ್ದಾರೆ.
ನಿನ್ನೆ ನಡೆದ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಎಂ.ಸಾಧಿಕ ಅಲಿ ಅವರು ದೇಸಾಯಿಯವರ ಹೆಸರನ್ನು ಸೂಚಿಸಿದರು. ಹನುಮಂತ ಹಳ್ಳಿಕೇರಿ ಅವರು ಅನುಮೋದಿಸಿದರು. ಪದಾಧಿಕಾರಿಗಳ ಒಪ್ಪಿಗೆ ಸೂಚಿಸಿದರು. 

Leave a Reply