ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ

 ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ೨೦೧೨-೧೩ನೇ ಸಾಲಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಹಿಂಗಾರು ಹಂಗಾಮಿಗೆ ಡಿ. ೩೧ ರೊಳಗಾಗಿ ಬೇಸಿಗೆ ಹಂಗಾಮಿಗೆ ೨೦೧೩ ರ ಫೆ. ೨೮,   ಅಥವಾ ಬೆಳೆ ಬಿತ್ತಿದ ೩೦ ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.
    ಹಿಂಗಾರು ಹಂಗಾಮು ಹಾಗೂ ಬೇಸಿಗೆ ಹಂಗಾಮು ತಾಲೂಕು ಮಟ್ಟದಲ್ಲಿ ಹೋಬಳಿವಾರು ಬೆಳಗಳನ್ನು ಅನುಸೂಚಿಸಲಾಗಿದೆ.
ಹಿಂಗಾರು ಹಂಗಾಮು : ಗಂಗಾವತಿ ತಾಲೂಕಿನ ಹುಲಿಹೈದರ ಹೋಬಳಿ- ಜೋಳ ಖುಷ್ಕಿ, ಕನಕಗಿರಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಹುರುಳಿ ಖುಷ್ಕಿ, ಕಾರಟಗಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ ನವಲಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ. ಹುರಳಿ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಸಿದ್ಧಾಪೂರ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಸೂರ್ಯಕಾಂತಿ ನೀರಾವರಿ. ಜೋಳ ನೀರಾವರಿ, ವೆಂಕಟಗಿರಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಮುಸುಕಿನಜೋಳ ನೀರಾವರಿ, ಕುಸುಬೆ ಖುಷ್ಕಿ,  ಹುರುಳಿ ಖುಷ್ಕಿ ಬೆಳೆ ನಿಗದಿಪಡಿಸಲಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಗೋಧಿ ನೀರಾವರಿ, ಸೂರ್ಯಕಾಂತಿ ನೀರಾವರಿ. ಅಗಸೆ ಖುಷ್ಕಿ, ಹುರುಳಿ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಮುಸುಕಿನ ಜೋಳ ಖುಷ್ಕಿ, ಇರಕಲ್‌ಗಡಾ- ಜೋಳ ಖುಷ್ಕಿ, ಹುರಳಿ ಖುಷ್ಕಿ, ಮುಸುಕಿನ ಜೋಳ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಕೊಪ್ಪಳ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಹುರಳಿ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಗೋಧಿ ಖುಷ್ಕಿ ಬೆಳೆ ಅನುಸೂಚಿಸಲಾಗಿದೆ.
ಕುಷ್ಟಗಿ ತಾಲೂಕಿನ ಹನುಮಸಾಗರ ಹೋಬಳಿ- ಜೋಳ ನೀರಾವರಿ, ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಅಗಸೆ ಖುಷ್ಕಿ, ಹುರಳಿ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಹನುಮನಾಳ- ಜೋಳ ನೀರಾವರಿ, ಜೋಳ ಖುಷ್ಕಿ, ಮುಸುಕಿನ ಜೋಳ ನೀರಾವರಿ, ಸೂರ್ಯಕಾಂತಿ ನೀರಾವರಿ, ಸೂರ್ಯಕಾಂತಿ ಖುಷ್ಕಿ, ಗೋಧಿ ಖುಷ್ಕಿ, ಕಡಲೆ ಖುಷ್ಕಿ, ಹುರಳಿ ಖುಷ್ಕಿ, ಕುಷ್ಟಗಿ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಅಗಸೆ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಜೋಳ ನೀರಾವರಿ, ಮುಸಕಿನ ಜೋಳ ನೀರಾವರಿ, ಹುರುಳಿ ಖುಷ್ಕಿ, ತಾವರೆಗೆರೆ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಗೋಧಿ ನೀರಾವರಿ, ಸೂರ್ಯಕಾಂತಿ ನೀರಾವರಿ, ಅಗಸೆ ಖುಷ್ಕಿ, ಕಡಲೆ ನೀರಾವರಿ, ಜೋಳ ನೀರಾವರಿ, ಹುರುಳಿ ಖುಷ್ಕಿ ಬೆಳೆ ನಿಗದಿಯಾಗಿದೆ.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಹೋಬಳಿ – ಮುಸುಕಿನ ಜೋಳ ನೀರಾವರಿ, ಹುರಳಿ ಖುಷ್ಕಿ, ಕುಕನೂರು- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಅಗಸೆ ಖುಷ್ಕಿ, ಮುಸಕಿನ ಜೋಳ ನೀರಾವರಿ, ಹುರುಳಿ ಖುಷ್ಕಿ, ಮಂಗಳೂರು- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಅಗಸೆ ಖುಷ್ಕಿ, ಗೋಧಿ ನೀರಾವರಿ, ಮುಸಕಿನ ಜೋಳ ನೀರಾವರಿ, ಹುರುಳಿ ಖುಷ್ಕಿ, ಯಲಬುರ್ಗಾ- ಜೋಳ ಖುಷ್ಕಿ, ಕಡಲೆ ಖುಷ್ಕಿ, ಸೂರ್ಯಕಾಂತಿ ಖುಷ್ಕಿ, ಕುಸುಬೆ ಖುಷ್ಕಿ, ಗೋಧಿ ಖುಷ್ಕಿ, ಸೂರ್ಯಕಾಂತಿ ನೀರಾವರಿ, ಅಗಸೆ ಖುಷ್ಕಿ, ಗೋಧಿ ನೀರಾವರಿ, ಕಡಲೆ ನೀರಾವರಿ, ಮುಸಕಿನ ಜೋಳ ನೀರಾವರಿ, ಹುರುಳಿ ಖುಷ್ಕಿ ಬೆಳೆಗಳನ್ನು ಅನುಸೂಚಿಸಲಾಗಿದೆ.
ಬೇಸಿಗೆ ಹಂಗಾಮು : ಗಂಗಾವತಿ ತಾಲೂಕಿನ ಗಂಗಾವತಿ-ಭತ್ತ ನೀರಾವರಿ, ಶೇಂಗಾ ನೀರಾವರಿ, ಹುಲಿಹೈದರ್- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕನಕಗಿರಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕಾರಟಗಿ- ಭತ್ತ ನೀರಾವರಿ, ಮರಳಿ- ಭತ್ತ ನೀರಾವರಿ, ನವಲಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಸಿದ್ಧಾಪೂರ- ಭತ್ತ ನೀರಾವರಿ, ವೆಂಕಟಗಿರಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ.
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಹಿಟ್ನಾಳ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಇರಕಲ್‌ಗಡಾ – ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕೊಪ್ಪಳ-ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ,
 ಕುಷ್ಟಗಿ ತಾಲೂಕಿನ ಹನಮನಾಳ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ. ಹನುಮಸಾಗರ ಹೋಬಳಿ – ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕುಷ್ಡಗಿ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ತಾವರಗೇರಾ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕುಕನೂರು- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಮಂಗಳೂರು -ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ ಬೆಳೆಗಳನ್ನು ನಿಗದಿಪಡಿಸಲಾಗಿದೆ.
    ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ/ನಾಟಿ ಮಾಡಿದ ನಂತರ ೩೦ ದಿವಸಗಳೊಳಗಾಗಿ ಅಥವಾ ಹಿಂಗಾರು ಹಂಗಾಮಿಗೆ ಡಿ. ೩೧ ರೊಳಗೆ  ಮತ್ತು ಬೇಸಿಗೆ ಹಂಗಾಮಿಗೆ ೨೦೧೩ ರ ಫೆ.೨೮ ರೊಳಗಾಗಿ ಯಾವುದು ಮೊದಲೇ ಅದರೊಳಗೆ ಬ್ಯಾಂಕಿಗೆ ಘೋಷಣೆಯನ್ನು ಸಲ್ಲಿಸಬೇಕು.   ನೋಂದಾಯಿಸುವ ಸಮಯದಲ್ಲಿ ಬೆಳೆ ಆರೋಗ್ಯಕರವಾಗಿರಬೇಕು. ಬೆಳೆ ಸಾಲ ಪಡೆಯುವ ರೈತರು ಹಿಂಗಾರು ಹಂಗಾಮಿನಲ್ಲಿ ೦೧-೧೦-೨೦೧೨ ರಿಂದ ೩೧-೧೨-೨೦೧೨ ರವರೆಗೆ ಮತ್ತು ಬೇಸಿಗೆ ಹಂಗಾಮಿನಲ್ಲಿ ೦೧-೦೧-೨೦೧೩ ರಿಂದ ೩೧-೦೩-೨೦೧೩ ರವರೆಗೆ ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸತಕ್ಕದ್ದು. ಬೆಳೆ ವಿಮೆ ಕಟ್ಟಲು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ. ೧೦ ರಷ್ಟು ರಿಯಾಯಿತಿ ಇರುತ್ತದೆ. ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ/ಕಂದಾಯ ಇಲಾಖೆ/ಸಹಕಾರ ಇಲಾಖೆ/ಸ್ಥಳೀಯ ವಾಣಿಜ್ಯ/ಗ್ರಾಮೀಣ/ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ) ಗಳ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಎ.ಪದ್ಮಯನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error