ಮೂರು ತಿಂಗಳಲ್ಲಿ ೬,೬೧,೦೦೦ ರೂ, ದಂಡ ವಸೂಲು.

ಕೊಪ್ಪಳ, ಜು.೨೦  ಕಾನೂನು ಮಾಪನಶಾಸ್ತ್ರ ಇಲಾಖೆ ಹುಬ್ಬಳ್ಳಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ
ಸಂಚಾರಿ ದಳ-೦೩ ಇವರಿಂದ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ
ವಿವಿದೆಡೆ ದಾಳಿ ನಡೆಸಿ, ಜೂನ್-೨೦೧೫ ರ ತ್ರೈಮಾಸಿಕ ಅಂತ್ಯದವರೆಗೆ ಒಟ್ಟು ೬,೬೧,೦೦೦
ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ.
     ಜೂನ್-೨೦೧೫ ರ ತ್ರೈಮಾಸಿಕ
ಅಂತ್ಯದವರೆಗೆ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು ೪೬೧ ಅಂಗಡಿ
ಮತ್ತು ಸಂಸ್ಥೆಗಳನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು ೬೨ ತೂಕ, ಅಳತೆ ಹಾಗೂ ೨೮
ಪೊಟ್ಟಣ ಸಾಮಗ್ರಿ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ
ಪ್ರಕರಣಗಳಿಂದ ಒಟ್ಟು ೬,೬೧,೦೦೦ ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ ಎಂದು
ಸಂಚಾರಿ ದಳ-೦೩, ಹುಬ್ಬಳ್ಳಿ ಕಛೇರಿಯ ಸಹಾಯಕ ನಿಯಂತ್ರಕ ಮಧುಕರ ಆರ್.ಘೋಡಕೆ ತಿಳಿಸಿದ್ದಾರೆ.

Related posts

Leave a Comment