ಡಿ. ೬ ರವರೆಗೆ ಮತದಾರರ ಹೆಸರು ಸೇರಿಸಲು ಅವಕಾಶ- ಚಂದ್ರಕಾಂತ್

  ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತದಾರರ ಯಾದಿಗಳ ಸಂಕ್ಷಿಪ್ತ ಪರಿಷ್ಕರಣೆ-೨೦೧೪ ರ ಕಾರ್ಯಕ್ರಮದ ನಿಮಿತ್ಯ ಮತದಾರರ ಯಾದಿಯಲ್ಲಿ ಹೆಸರನ್ನು ಸೇರ್ಪಡೆ ಮಾಡುವ, ಹೆಸರನ್ನು ತಿದ್ದುಪಡಿ ಮಾಡುವ ಹಾಗೂ ಹೆಸರನ್ನು ತೆಗೆದು ಹಾಕುವ ಕಾರ್ಯದ ಅವಧಿಯನ್ನು ಡಿ.೦೬ ರವರೆಗೆ ವಿಸ್ತರಿಸಲಾಗಿದೆ ಎಂದು ಕೊಪ್ಪಳ ತಹಶೀಲ್ದಾರ್ ಚಂದ್ರಕಾಂತ ಎಲ್.ಡಿ. ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಂಡು ೨೦೧೪ ರ ಜ. ೧ ಕ್ಕೆ ೧೮ ವರ್ಷ ತುಂಬಿದವರು ತಮ್ಮ ಹೆಸರನ್ನು ಸಮೀಪದ ಬೂತ್ ಮಟ್ಟದ ಅಧಿಕಾರಿಗಳಿಗೆ ನಿಗದಿತ ನಮೂನೆ-೬ ರಲ್ಲಿ ವಯಸ್ಸಿನ ದಾಖಲೆ, ವಾಸವಾಗಿರುವ ಸ್ಥಳದ ದಾಖಲೆ ಹಾಗೂ ಇತ್ತೀಚಿನ ಕಲರ್ ಫೋಟೋದೊಂದಿಗೆ ಡಿ.೦೬ ರ ಸಂಜೆ ೫.೩೦ ರೊಳಗಾಗಿ ಸಲ್ಲಿಸುವಂತೆ ಕೊಪ್ಪಳ ತಹಶೀಲ್ದಾರ್ ಚಂದ್ರಕಾಂತ ಎಲ್.ಡಿ.  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Please follow and like us:
error