ಗವಿಸಿದ್ಧೇಶ್ವರ ಕಾಲೇಜಿಗೆ ೨ ರ‍್ಯಾಂಕುಗಳು : ರ‍್ಯಾಂಕ್ ವಿಜೇತರಿಗೆ ಅಭಿನಂದನೆಗಳು

ಕೊಪ್ಪಳ : ನಗರದ ಪ್ರತಿಷ್ಠಿತ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿನ ಇಬ್ಬರು ವಿದ್ಯಾರ್ಥಿಗಳು ಬಿ.ಕಾಂ ಅಂತಿಮ ವರ್ಷದ ಪರೀಕ್ಷೆಯಲ್ಲಿ ಕ್ರಮವಾಗಿ ರ‍್ಯಾಂಕ್ ಪಡೆದಿರುತ್ತಾರೆ. ಇವರುಗಳಲ್ಲಿ ಕುಮಾರಿ ಶೈಜಲ್ ಜೈನ್ ೨ನೇ ರ‍್ಯಾಂಕ್ ಹಾಗೂ ಕುಮಾರಿ ವರ್ಷಾ ೪ನೇ ರ‍್ಯಾಂಕ್ ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳು ಕಳೆದ ಎಪ್ರೀಲ್ / ಮೇ ೨೦೧೪ ರಲ್ಲಿ ಜರುಗಿದ ಬಿ.ಕಾಂ ಅಂತಿಮ ವರ್ಷದ ಪರೀಕ್ಷೆಯನ್ನು ಬರೆದಿದ್ದರು. 
           ವಿದ್ಯಾರ್ಥಿನಿಯರ ಈ ಸಾಧನೆಗೆ ಶ್ರೀ ಗ.ವಿ.ವ ಸೋಲ್ ಟ್ರಸ್ಟಿಗಳಾದ ಪೂಜ್ಯ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವಾದಿಸಿದ್ದಾರೆ.  ಅಧ್ಯಕ್ಷರಾದ ಟಿ.ಜಿ ಹಿರೇಮಠ, ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ, ಸದಸ್ಯರಾದ ಎಸ್.ಆರ್ ನವಲಿಹಿರೇಮಠ, ಸಂಜಯಕೊತಬಾಳ, ಗವಿಸಿದ್ದಪ್ಪ ಆರೇರ್ ಪ್ರಾಚಾರ್ಯರಾದ ಎಸ್.ಎಲ್ ಮಾಲಿಪಾಟೀಲ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.
Please follow and like us:
error