ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಸಾಬೀತು ಪಡಿಸಬೇಕು

ಕೊಪ್ಪಳದ
ಅಭಯ ಸಾಲ್ವೆಂಟ್ ಬಳಿಯ ಟ್ರಾಕ್ ಮೇಲೆ ನಿನ್ನೆ ಅನುಮನಾಸ್ಪದ
ರೀತಿಯಲ್ಲಿ   ವ್ಯಕ್ತಿಯ ಶವ ಪತ್ತೆಗಿದ್ದು, ಕೊಪ್ಪಳದ ಗಂಗಾವತಿ ತಾಲೂಕಿನ ಮರಕುಂಬಿ ನಿವಾಸಿಯಾಗಿದ್ದಾನೆ.  ಮೃತ ವ್ಯಕ್ತಿಯನ್ನು ದೊಡ್ಡ ವಿರೇಶ ಎಂದು
ಗುರುತಿಸಲಾಗಿದೆ. ಈತನ ಮೃತ ದೇಹ ಸ್ವಗ್ರಾಮಕ್ಕೆ ತರಲಾಗಿದ್ದು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಕಳೆದ ವರ್ಷ ಮರಕುಂಬಿ ಗ್ರಾಮದಲ್ಲಿ ನಡೆದ ಸವರ್ಣಿಯರ ಮತ್ತು ದಲಿತರ ನಡುವೆ ನಡೆದ ಘರ್ಷಣೆಯ
ಪ್ರಮುಖ ಸಾಕ್ಷೀದಾರನಾಗಿದ್ದನು, ಘರ್ಷಣೆ ಸಂಬಂಧ ಪಟ್ಟಂತೆ ನಿನ್ನೆ ಕೊಪ್ಪಳ ಜಿಲ್ಲಾ ಸತ್ರ
ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಆಗಮಿಸಿದ್ದನು. 
              ಕೋರ್ಟ್‌ನಲ್ಲಿ ಸಾಕ್ಷಿ ಹೇಳುವ ಮುನ್ನವೇ
ರೈಲ್ವೇ ಹಳಿ ಬಳಿ ಶವ ಪತ್ತೆಯಾಗಿದ್ದು, ಎಲ್ಲರಲ್ಲು ಅನುಮಾನ
ಮೂಡಿಸಿದ್ದು, ಈತನ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಈ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ದಲಿತರ ಮತ್ತು ಸವರ್ಣಿಯರ ಘರ್ಷಣೆಯಿಂದ
ಬೇಸುತ್ತಿದ್ದಾನೆ. ಈ ಕುರಿತು ಕೊಪ್ಪಳದ ಡಿಸಿಗೆ ಡೆತ್ ನೋಟ್ ಬರೆದಿದ್ದಾನೆ. ಮೃತನ ಕುಟುಂಬದವರು
ಮತ್ತು ಸಂಘಟನೆಗಾರರು ಕೂಡ ಇದು ಆತ್ಮಹತ್ಯೆಯೋ ಅಥವಾ ಕೊ

ಲೆಯೋ ಎಂದು ಸಾಬೀತು ಪಡಿಸಬೇಕು, ಉನ್ನತ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದ್ರು..

Leave a Reply