fbpx

ಶಾಲಾ ಸಂಸತ್ ಉದ್ಘಾಟನೆ.

ಕೊಪ್ಪಳ, ೦೮ : ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೨೦೧೫-೧೬ ನೇ ಸಾಲಿನ ಶಾಲಾ ಸಂಸತ್ ಉದ್ಘಾಟನೆಯನ್ನು ನಗರದ ಬಾಲಕರ ಪ.ಪೂ. ಕಾಲೇಜಿನ ಪ್ರಾಚಾರ್ಯ ಎಸ್.ಬಿ. ರಾಜೂರ ಉದ್ಘಾಟಿಸಿ ಮಕ್ಕಳು ತಾಳ್ಮೆ, ಸಹನೆ ಮತ್ತು ಧನಾತ್ಮಕ ಗುಣಗಳನ್ನು ಬೆಳೆಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ನೀತಿಕಥೆಗಳ ಮೂಲಕ ಮಕ್ಕಳನ್ನು ರಂಜಿಸಿದರು. ಶಾಲಾ ಪ್ರಾಚಾರ್ಯ ಎ. ಧನಂಜಯನ್ ಮಾತನಾಡಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡುವ ಹಾಗೆ ಶಾಲಾ ಹಂತದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಲು ಶಾಲಾ ಸಂಸತ್ ಸಹಕಾರಿಯಾಗಲಿದೆ ಎಂದರು. ಶಾಲಾ ಸಂಸತ್ ಚುನಾವಣೆಯಲ್ಲಿ ಮಕ್ಕಳಿಂದಲೇ ಆಯ್ಕೆಯಾದ ಶಾಲಾ ಪ್ರಧಾನಿ ಮತ್ತು ಮಂತ್ರಿಮಂಡಲದ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿಯಾಗಿ ರೇಣುಕಾ ಆರೆರ್, ಉಪರಾಷ್ಟ್ರಪತಿಯಾಗಿ ಆಫಿಯಾ, ಪ್ರಧಾನ ಮಂತ್ರಿಯಾಗಿ ಸಾಯಿ ಯುವರಾಜ್, ಸ್ಪೀಕರ್ ಆಗಿ ಪದ್ಮಾವತಿ, ವಿರೋಧ ಪಕ್ಷದ ನಾಯಕರಾಗಿ ನೇಹಾ ಬಿಸರಳ್ಳಿ,, ಶಾಲಾ ನಾಯಕರಾಗಿ ಸುಧಾ ಮತ್ತು ಅಬ್ರಾರ್ ಮನಿಯಾರ್ ಸೇರಿದಂತೆ ಇನ್ನಿತರ ಮಂತ್ರಿಗಳೂ ಅಧಿಕಾರ ವಹಿಸಿಕೊಂಡರು. ನಂತರ ೧೫ ನಿಮಿಷಗಳ ಕಾಲ ಸಂಸತ್ತಿನ ಆಕರ್ಷಕ ಅಣುಕು ಪ್ರದರ್ಶನ ಮಾಡಲಾಯಿತು. ವೇದಿಕೆಯ ಮೇಲೆ ಶಾಲಾ ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ, ಸಮಾಜ ವಿಜ್ಞಾನ ಶಿಕ್ಷಕ ಸಮೀರ ಜೋಶಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಬಿ. ರಾಜೂರ್ ಅವರಿಗೆ ಶಾಲೆಯ ವತಿಯಿಂದ ಶಾಲಾ ಪ್ರಾಚಾರ್ಯರು ಸನ್ಮಾನಿಸಿದರು. ಆರಂಭದಲ್ಲಿ ಸುಷ್ಮಾ ಮತ್ತು ವೈಷ್ಣವಿ ಪ್ರಾರ್ಥಿಸಿದರೆ, ಜಯಂತ್ ಸ್ವಾಗತಿಸಿದರು. ನಿರೂಪಣೆಯನ್ನು ವಿಜಯ ಲಕ್ಷ್ಮೀ ಮತ್ತು ಪ್ರಿಯಾಂಕ ಮಾಡಿದರೆ ಕೊನೆಯಲ್ಲಿ ಕಾರ್ತಿಕ್ ವಂದನಾರ್ಪಣೆ ಮಾಡಿದರು.
Please follow and like us:
error

Leave a Reply

error: Content is protected !!