೩ ದಿನದ ಪೌರತ್ವ ತರಬೇತಿ ಶಿಬಿರ.

ಕೊಪ್ಪಳ-06-  ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಕೊಪ್ಪಳದ ೨೦೧೪-೧೫ ನೇ ಸಾಲಿನ ೩ ದಿನದ ಪೌರತ್ವ ತರಬೇತಿ ಶಿಬಿರ (ಸಿಟಿಸಿ)ದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಾಗಿತ್ತು, ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸಾವಿತ್ರಿ ಮುಜುಂದಾರ್ ಮಾತನಾಡಿ  ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವನೆ ಅಗತ್ಯವೆಂದು ಹೇಳಿದರು ಈ ಪೌರತ್ವ ಶಿಬಿರವು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಹೊಂದಾಣಿಕೆ ಸಾಮರ್ಥ್ಯ ಬೆಳೆಸುತ್ತದೆ ಎಂದು ಹೇಳಿ ಮುಂದುವರೆದು ಮಾತನಾಡುತ್ತಾ ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಒಂದು ಸ್ನಾತಕೋತ್ತರ ಕೇಂದ್ರ ಅವಶ್ಯಕತೆ ಇದ್ದು ಅದನ್ನು ಮಂಜೂರು ಮಾಡಲು. ತಾವು ಪ್ರಮಾಣಿಕವಾಗಿ ಪ್ರಯತ್ನ ಮಾಡುವದಾಗಿ. ಹೇಳುತ್ತಾ ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲದ ಅವಶ್ಯಕತೆ ಇದೆ ಎಂದು ಹೇಳಿದರು ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನವಹಿಸಿ  ಮಾತನಾಡಿ ಯುವ ಮುಂಖಡರಾದ ಗೂಳಪ್ಪ ಹಲಿಗೇರಿ ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಸರಕಾರ ಮಟ್ಟದ ಸ್ಥಳೀಯ ಸಚಿವ ಹಾಗೂ ಶಾಸಕರ ಬೆಂಬಲದೊಂದಿಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವದಾಗಿ ಹೇಳಿದರು ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಕಾಶ.ಕೆ.ಬಡಿಗೇರ  ಈ ಶಿಬಿರದ ಅಂಗವಾಗಿ ಗ್ರಾಮದಲ್ಲಿ ೮೦೦ ಸಸಿಗಳನ್ನು ನೆಟ್ಟು ಇಡಿ ಗ್ರಾಮವನ್ನು ಹಸೀರುಕರಣ ಗೋಳಿಸುವ ಉದ್ದೇಶವಿದೆ ಎಂದು ಹೇಳಿದರು. ಈ ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ರಾಮನಗೌಡ ಪೋ.ಪಾಟೀಲ್.ತೋಟಪ್ಪ ಕಾಮನೂರು. ದೇವಪ್ಪ ಕೊಪ್ಪಳ. ಮಾತನಾಡಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನಿಂಗನಗೌಡ.ಶಿವಯ್ಯ.ರಾಮಣ್ಣ.ಚಂದ್ರು.ನಿಂಗಪ್ಪ. ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಮತ್ತು ಸಂಸ್ಥೆಯ ಉಪನ್ಯಾಸಕರಾದ ಜಿ.ಎಸ್.ಸೊಪ್ಪಿಮಠ.ಆನಂದರಾವ್‌ ದೇಸಾಯಿ. ಎ.ಎನ್.ತಳಕಲ್.ಎಸ್.ಎಸ್.ವೀರನಗೌಡ್ರ.ಜೆ.ಹೀರೆಮಠ. ಡಿ.ಎಂ.ಬಡಿಗೇರ. ಸುಭಾಷಚಂದ್ರ.ಡಿ.ಹಿಸಮನಿ. ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಶೈಲಜಾ ಅರಳಲೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೌನೇಶ ಸ್ವಾಗತಿಸಿದರು. ಗೌರಮ್ಮ.ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಮತಾ ನಿರೂಪಿಸಿದರು.ದೇವಪ್ಪ ವಂದಿಸಿದರು.
Please follow and like us:
error