ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ವಚನಗಾಯನ ಸ್ಪರ್ಧೆ

 ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯಲಿ, ಶರಣರ ತತ್ವ ಸಂದೇಶಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಶಾಲೆಯ ೧ ರಿಂದ ೮ ನೇ ತರಗತಿಯವರೆಗಿನ ಮಕ್ಕಳಿಗೆ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
  ವಚನ ಗಾಯನ ಸ್ಪರ್ಧೆ ಹಮ್ಮಿಕೊಂಡಿರುವ ಉದ್ದೇಶ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ರೋಜ್ ಮೇರಿ ಅವರು, ಇಂದಿನ ದಿನಮಾನಗಳಲ್ಲಿ ಶಾಲೆಗಳಲ್ಲಿ ಕೇವಲ ಪಠ್ಯ ಮತ್ತು ಕ್ರೀಡೆಗಳ ವಿಷಯಗಳಿಗಷ್ಟೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ. ಶರಣರ ತತ್ವ ಸಂದೇಶಗಳ ಸಾರವನ್ನು

ಭವಿಷ್ಯದಲ್ಲಿ ಉಳಿಸಿ, ಬೆಳೆಸುವ ಉದ್ದೇಶದಿಂದ, ಮಕ್ಕಳಿಗೆ ವಚನಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಪಾಲ್ಗೊಂಡಿದ್ದು ಸಂತಸವನ್ನು ಉಂಟುಮಾಡಿದೆ ಎಂದರು.

  ಶಾಲೆಯ ಆಡಳಿತಾಧಿಕಾರಿ ವಿಜಯ ಹಿರೇಮಠ, ಶಿಕ್ಷಕರುಗಳಾದ ರಾಜು, ಶ್ರೀದೇವಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error